ದೇಶ

ಮಹಾರಾಷ್ಟ್ರ: ಪ್ರಿಸೈಡಿಂಗ್ ಆಫೀಸರ್ ಜೊತೆ ಅನುಚಿತ ವರ್ತನೆ; 12 ಬಿಜೆಪಿ ಶಾಸಕರಿಗೆ ಒಂದು ವರ್ಷ ಅಮಾನತು ಶಿಕ್ಷೆ!

Nagaraja AB

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಕಚೇರಿಯಲ್ಲಿ ಪ್ರಿಸೈಂಡಿಂಗ್ ಆಫೀಸರ್ ಭಾಸ್ಕರ್ ಜಾದವ್ ಜೊತೆಗೆ ಅನುಚಿತವಾಗಿ ವರ್ತಿಸಿದ 12 ಬಿಜೆಪಿ ಶಾಸಕರನ್ನು ಒಂದು ವರ್ಷದವರೆಗೂ ಸೋಮವಾರ ಅಮಾನತು ಮಾಡಲಾಗಿದೆ.

ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಾಬ್ ಮಂಡಿಸಿದ ಶಾಸಕರನ್ನು ಅಮಾನತುಗೊಳಿಸುವ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಸಂಜಯ್ ಕುಟೆ, ಅಶಿಸ್ ಶೆಲಾರ್. ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಖಾಲ್ಕರ್, ಪರಾಗ್ ಅಲಾವಾನಿ, ಹರೀಶ್ ಪಿಂಪಾಲೆ, ಯೋಗೇಶ್ ಸಾಗರ್, ಜಯ ಕುಮಾರ್ ರವಾತ್, ನಾರಾಯಣ್ ಕುಚೆ, ರಾಮ್ ಸತ್ಪುಟ್ ಮತ್ತು ಬಂಟಿ ಭಾಂಗ್ಡಿಯಾ ಅಮಾನತುಗೊಂಡ ಶಾಸಕರಾಗಿದ್ದಾರೆ.

ಅಮಾನತುಗೊಂಡ ಅವಧಿಯಲ್ಲಿ 12 ಶಾಸಕರಿಗೆ ಮುಂಬೈ ಮತ್ತು ನಾಗ್ಪುರದ ಶಾಸಕಾಂಗ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಪರಬ್ ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸದಸ್ಯರು, ಪ್ರತಿಪಕ್ಷಗಳು ಸದನದ ಕಲಾಪವನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.

ಇದು ಸುಳ್ಳಿನ ಆರೋಪವಾಗಿದೆ. ವಿರೋಧ ಪಕ್ಷಗಳ ಆಸನಗಳನ್ನು ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ, ಏಕೆಂದರೆ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಕೋಟಾದಲ್ಲಿ ಸರ್ಕಾರದ ಸುಳ್ಳನ್ನು ನಾವು ಬಹಿರಂಗಪಡಿಸಿದ್ದೇವೆ ಎಂದು ಫಡ್ನವೀಸ್ ಹೇಳಿದ್ದಾರೆ. ಬಿಜೆಪಿ ಸದಸ್ಯರು ಪ್ರಿಸೈಡಿಂಗ್ ಆಫೀಸರ್ ನ್ನು ನಿಂದಿಸಿಲ್ಲ ಎಂದು ಅವರು ತಿಳಿಸಿದ್ದಾರೆ. 

ಶಿವಸೇನಾ ಶಾಸಕರು ನಿಂದನ ಪದಗಳನ್ನು ಬಳಸಿದ್ದಾರೆ. ಸ್ಪೀಕರ್ ಕಚೇರಿಯಿಂದ ನಮ್ಮ ಪಕ್ಷದ ಶಾಸಕರನ್ನು ಕರೆದಿರುವುದಾಗಿ ಪ್ರತಿಪಕ್ಷ ನಾಯಕ ಹೇಳಿದ್ದಾರೆ.ಮಹಾರಾಷ್ಟ್ರ ಬಿಜೆಪಿ ಮುಖಂಡ ಅಶೀಸ್ ಶೆಲಾರ್, ಕ್ಷಮೆ ಕೋರಿದ್ದು, ಈ ವಿಚಾರವನ್ನು ಇಲ್ಲಿಯೇ ಬಿಡಬೇಕು ಎಂದಿದ್ದಾರೆ. 

ಇದಕ್ಕೂ ಮೊದಲು ಎನ್‌ಸಿಪಿ ಮುಖಂಡ ಮತ್ತು ಸಚಿವ ನವಾಬ್ ಮಲಿಕ್,  ಬಿಜೆಪಿ ಸದಸ್ಯರು ಭಾಸ್ಕರ್ ಜಾಧವ್ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು ಮತ್ತು ಈ ವಿಷಯದ ಬಗ್ಗೆ ರಾಜ್ಯ ವಿಧಾನಸಭೆಯನ್ನು ನಾಲ್ಕು ಬಾರಿ ಮುಂದೂಡಲಾಯಿತು.

SCROLL FOR NEXT