ದೇಶ

ವಾಯು ನೆಲೆ ಮೇಲೆ ಡ್ರೋನ್ ದಾಳಿ ಬೆನ್ನಲ್ಲೇ 10 ಡ್ರೋನ್ ಪ್ರತಿರೋಧಕ ವ್ಯವಸ್ಥೆ ಖರೀದಿಸಲು ಐಎಎಫ್ ಮುಂದು

Srinivas Rao BV

ನವದೆಹಲಿ: ಜೂ.27 ರಂದು ಜಮ್ಮು ವಾಯುನೆಲೆ ಮೇಲೆ ನಡೆದ ಮೊದಲ ಡ್ರೋನ್ ಭಯೋತ್ಪಾದಕ ದಾಳಿಯ ನಂತರ ಇಂತಹ ಘಟನೆಗಳನ್ನು ತಡೆಯುವುದಕ್ಕೆ ಐಎಎಫ್ ಕ್ರಮ ಕೈಗೊಂಡಿದೆ.

ಡ್ರೋನ್ ದಾಳಿಗೆ 10 ಪ್ರತಿರೋಧಕ ವ್ಯವಸ್ಥೆಯನ್ನು ಖರೀದಿಸುವುದಕ್ಕಾಗಿ ಐಎಎಫ್ ಬಿಡ್ ಗಳನ್ನು ಆಹ್ವಾನಿಸಿದೆ. ಪ್ರತಿ ದಾಳಿ ನಡೆಸಬಲ್ಲಂತಹ 10 ಮಾನವ ರಹಿತ ವೈಮಾನಿಕ ವ್ಯವಸ್ಥೆಗಳನ್ನು ಖರೀದಿಸಲು ಏರ್ ಫೋರ್ಸ್ ಸ್ಟೇಷನ್ ಮುಂದಾಗಿದೆ.

ಐಎಎಫ್ ಭಾರತೀಯ ಸಂಸ್ಥೆಗಳಿಂದ ಪ್ರತಿಕ್ರಿಯೆಗಳನ್ನು ಕೇಳಿದೆ. ಡ್ರೋನ್ ದಾಳಿ ಪ್ರತಿರೋಧಕ ವ್ಯವಸ್ಥೆಗೆ ಸಿಯುಎಎಸ್ ಎಂದು ಹೇಳಲಾಗಿದ್ದು, ಎದುರಾಳಿ ಡ್ರೋನ್ ನ್ನು ಹೊಡೆದುರುಳಿಸುವುದಕ್ಕೆ ಬಳಕೆ ಮಾಡಲಾಗುತ್ತದೆ.

SCROLL FOR NEXT