ದೇಶ

ಯುಎಇಯಲ್ಲಿ ಬಂಧಿಯಾಗಿರುವ ಮಗನ ಬಿಡುಗಡೆಗೆ ಅಗತ್ಯ ಕ್ರಮಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ ಕೇರಳ ಮಹಿಳೆ

Srinivas Rao BV

ಕೊಚ್ಚಿ: ಯುಎಇಯಲ್ಲಿ ಗೂಢಚಾರಿಕೆಯ ಆರೋಪದಡಿ 2015 ರಿಂದ ಬಂಧನದಲ್ಲಿರುವ ಮಗನನ್ನು ಬಿಡುಗಡೆಗೊಳಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶನ ನೀಡಲು ಮನವಿ ಮಾಡಿ ಮಹಿಳೆಯೊಬ್ಬರು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

ಶಿಹಾನಿ ಮೀರಾ ಸಾಹೀಬ್ ಜಮಾಲ್ ಮುಹಮ್ಮದ್ ಅವರ ತಾಯಿ, 2015 ರಿಂದಲೂ ಅಬುಧಾಬಿಯ ಜೈಲಿನಲ್ಲಿರುವ ಮಗನನ್ನು ಬಿಡಿಸಿಕೊಳ್ಳುವುದಕ್ಕಾಗಿ ಯತ್ನಿಸುತ್ತಿದ್ದಾರೆ. 

ಯುಎಇಯಲ್ಲಿ ಭಾರತೀಯ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಗಳ ನೆರವಿನೊಂದಿಗೆ ಈ ವ್ಯಕ್ತಿ ಗೂಢಾಚಾರಿಕೆ ನಡೆಸುತ್ತಿದ್ದ ಎಂಬ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ.

"ಶಿಹಾನಿ ಮೀರಾ ಸಾಹೀಬ್ ಜಮಾಲ್ ಮುಹಮ್ಮದ್ ನ್ನು ಬಿಡುಗಡೆಗೊಳಿಸುವುದಕ್ಕಾಗಿ ಅಗತ್ಯವಿರುವ  ರಾಜತಾಂತ್ರಿಕ, ರಾಜಕೀಯ, ಕಾನೂನಾತ್ಮಕ ನೆರವನ್ನು ನೀಡುವಂತೆ ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೇರಳ ಹೈಕೋರ್ಟ್ ಗೆ ಶಾಹುಬನತ್ ಬೀವಿ ಜೋಸ್ ಅಬ್ರಾಹಮ್ ಎಂಬ ಅಡ್ವೊಕೇಟ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. 

ತಮ್ಮ ಮಗನಿಗೆ ಯುಎಇಯಲ್ಲಿ ಮೂರನೇ ದರ್ಜೆಯ ಹಿಂಸೆ ನೀಡಲಾಗುತ್ತಿದೆ. 4 ತಿಂಗಳಿನಿಂದ ತೀವ್ರವಾದ ತಾಪಮಾನಗಳಲ್ಲಿ ಆತನನ್ನು ಇರಿಸಲಾಗುತ್ತಿದೆ. ವಿದ್ಯುತ್ ವೋಲ್ಟೇಜ್ ಶಾಕ್ ಗಳನ್ನು ನೀಡಲಾಗುತ್ತಿದೆ. ಆತನೊಂದಿಗೆ ಯುಎಇಯಲ್ಲಿದ್ದ ಆತನ ಪತ್ನಿ, ಸಹೋದರರು ಸಂಬಂಧಿತರನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿಲ್ಲ, ಯಾವುದೇ ಕಾನೂನಾತ್ಮಕ ನೆರವನ್ನೂ ನಿರಾಕರಿಸಲಾಗುತ್ತಿದೆ ಎಂದು ಬೀವಿ ಆರೋಪಿಸಿದ್ದಾರೆ. 

ಶಿಹಾನಿ ಮೀರಾ ಸಾಹೀಬ್ ಜಮಾಲ್ ಮುಹಮ್ಮದ್ ಆರೋಪ ಯುಎಇಯಲ್ಲಿ ಸಾಬೀತಾಗಿದೆ ಎನ್ನಲಾಗುತ್ತಿದ್ದು 10 ವರ್ಷ ಜೈಲು ಹಾಗೂ ಇನ್ನೂ ಸ್ಪಷ್ಟವಾಗದಷ್ಟು ಮೊತ್ತವನ್ನು ಕಾನೂನು ಶುಲ್ಕಗಳೆಡೆಗೆ ದಂಡದ ರೂಪದಲ್ಲಿ ಪಾವತಿಸಬೇಕು ಹಾಗೂ ಆ ನಂತರ ಗಡಿಪಾರು ಮಾಡಬೇಕೆಂಬ ಆದೇಶವನ್ನು ಅಲ್ಲಿನ ಫೆಡರಲ್ ಸುಪ್ರೀಂ ಕೋರ್ಟ್ 2017, ಏಪ್ರಿಲ್ 16 ರಂದು ನೀಡಿತ್ತು.

SCROLL FOR NEXT