ದೇಶ

19 ವರ್ಷದ ಯುವ ನೌಕಾಪಡೆಯ ಅಧಿಕಾರಿ ಗುಂಡೇಟಿನಿಂದ ಸಾವು, ಆತ್ಮಹತ್ಯೆ ಶಂಕೆ

Raghavendra Adiga

ಕೊಚ್ಚಿ: 19 ವರ್ಷದ ಕಿರಿಯ ನೌಕಾಪಡೆಯ ಅಧಿಕಾರಿಯೊಬ್ಬರು ಮಂಗಳವಾರ ಮುಂಜಾನೆ ಕೊಚ್ಚಿಯ ನೌಕಾ ನೆಲೆಯಲ್ಲಿ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ನೌಕಾಪಡೆ ಮತ್ತು ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿದ್ದಾರೆ.

ಮೃತನನ್ನು ಉತ್ತರ ಪ್ರದೇಶದ ಅಲಿಘರದ  ನಿವಾಸಿ ತುಷಾರ್ ಅಕ್ರಿ ಎಂದು ಗುರುತಿಸಲಾಗಿದೆ. ಅವಿವಾಹಿತನಾಗಿದ್ದ ನಾವಿಕ ಮಂಗಳವಾರ ಬೆಳಿಗ್ಗೆ 12 ರಿಂದ ಬೆಳಿಗ್ಗೆ 4 ರವರೆಗೆ ಸೆಕ್ಯುರಿಟಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅವರನ್ನು ಕಟಾರಿ ಬಾಗ್‌ನ ಸಿ 2 ಟವರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು.

"ಮುಂಜಾನೆ 2.30 ರಿಂದ 3.30 ರ ನಡುವೆ ನೌಕಾಪಡೆಯ ಮತ್ತೊಬ್ಬ ಅಧಿಕಾರಿ ವಿದ್ಯುತ್ ಬ್ಯಾಟರಿ ಬದಲಾಯಿಸಲು ಟವರ್ ಗೆ ಭೇಟಿ ನೀಡಿದ್ದ ವೇಳೆ ಗುಂಡೇಟಿನಿಂದ ಗಾಯಗೊಂಡಿದ್ದ ನಾವಿಕನನ್ನು ನೋಡಿದ್ದಾರೆ. ಪೊಲೀಸರು ಮತ್ತು ನೌಕಾಪಡೆ ಇಬ್ಬರೂ ಇದ್ದುದರಿಂದ ಇದು ಆತ್ಮಹತ್ಯೆಯ ಪ್ರಕರಣ ಎಂದು ಶಂಕಿಸಲಾಗಿದೆ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ" ಎಂದು ಬಂದರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತನ ಶವವನ್ನು ಪ್ರಸ್ತುತ ನೌಕಾಪಡೆಯ ಆಸ್ಪತ್ರೆಯಲ್ಲಿರಿಸಿದ್ದು ಅದನ್ನು ಅವರ ಸ್ವಗ್ರಾಮಕ್ಕೆ ಕಳುಹಿಸುವ ಮೊದಲು ಮರಣೋತ್ತರ ಪ್ರಕ್ರಿಯೆಗಾಗಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗುವುದು.

ತನಿಖೆ ನಡೆಸಲು ಮತ್ತು ಸಾವಿನ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ನೌಕಾಪಡೆಯು ಶಾಸನಬದ್ಧ ತನಿಖಾ ಮಂಡಳಿಯನ್ನು ರಚಿಸಿದೆ. ಇತ್ತೀಚಿನ ವರ್ಷಗಳಲ್ಲಿ, ಕೊಚ್ಚಿಯ ನೇವಲ್ ಬೇಸ್‌ ನಲ್ಲಿ ಇದೇ ರೀತಿಯ ಆತ್ಮಹತ್ಯೆ ಘಟನೆಗಳು ವರದಿಯಾಗಿವೆ, ಹೆಚ್ಚಾಗಿ ಕೆಲಸದ ಒತ್ತಡ ಮತ್ತು ವೈಯಕ್ತಿಕ ಸಮಸ್ಯೆಗಳಿಂದ ಈ ಘಟನೆಗಳು ಸಂಭವಿಸಿದೆ.

SCROLL FOR NEXT