ದೇಶ

ಪತ್ರಕರ್ತ ಸಿದ್ಧಿಖ್ ಕಪ್ಪನ್ ಗೆ ಮತ್ತೆ ಜಾಮೀನು ನಿರಾಕರಣೆ 

Srinivasamurthy VN

ನವದೆಹಲಿ: ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ಧಿಖ್ ಕಪ್ಪನ್ ಗೆ ಮತ್ತೆ ಜಾಮೀನು ನಿರಾಕರಿಸಲಾಗಿದೆ.

ಇಂದು ಮಥುರಾ ಕೋರ್ಟ್ ನಡೆದ ವಿಚಾರಣೆಯಲ್ಲಿ ಜಾಮೀನು ನಿರಾಕರಿಸಲಾಗಿದ್ದು, ಮೂಲಕ ಪತ್ರಕರ್ತನ 8 ತಿಂಗಳ ಸೆರೆವಾಸ ಮತ್ತೆ ಮುಂದುವರೆಯುವಂತಾಗಿದೆ.

ಕಳೆದ ವರ್ಷದ ಅಕ್ಟೋಬರ್ ನಲ್ಲಿ ಉತ್ತರಪ್ರದೇಶದ ಹತ್ರಾಸ್ ನಲ್ಲಿ ದಲಿತ ಮಹಿಳೆ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣದ ವರದಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಪತ್ರಕರ್ತ ಸಿದ್ಧಿಖ್ ಕಪ್ಪನ್ ರನ್ನು ಬಂಧಿಸಲಾಗಿತ್ತು. 

ಇದೇ ಪ್ರಕರಣದಲ್ಲಿ ಕಪ್ಪನ್ ಮಾತ್ರವಲ್ಲದೇ ಇತರೆ ಮೂವರನ್ನು ಕೂಡ ವಿವಾದಿತ ಅಲ್ಪಸಂಖ್ಯಾತ ಸಮುದಾಯದ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆ ಸಂಬಂಧ ಹೊಂದಿದ್ದಾರೆಂದು ಮತ್ತು ಶಾಂತಿ ಉಲ್ಲಂಘನೆ ಆರೋಪದ ಮೇರೆಗೆ ಬಂಧಿಸಲಾಗಿತ್ತು.  

ಇತ್ತೀಚೆಗಷ್ಟೇ ನಿಧನರಾಗಿದ್ದ ಕಪ್ಪನ್ ತಾಯಿ
ಕಳೆದ ಜೂನ್ 18ರಂದು ಕಪ್ಪನ್ ಅವರ 90 ವರ್ಷದ ತಾಯಿ ನಿಧನರಾಗಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದರು. ಕಪ್ಪನ್ ಜೈಲಿನಲ್ಲಿ ಇದ್ದಿದರಿಂದ ತಾಯಿಯ ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಿಸಲು ಸಾಧ್ಯವಾಗಿರಲಿಲ್ಲ ಎಂದು ವರದಿ ವಿವರಿಸಿದೆ.
 

SCROLL FOR NEXT