ಸ್ಟಾನ್ ಸ್ವಾಮಿ 
ದೇಶ

ಜೈಲಿನಲ್ಲಿ ಹೋರಾಟಗಾರ ಸ್ವಾನ್ ಸ್ವಾಮಿ ನಿಧನಕ್ಕೆ ವಿಶ್ವಸಂಸ್ಥೆ 'ಆಘಾತ'!

ಜೈಲಿನಲ್ಲಿದ್ದ 84 ವರ್ಷದ ಮಾನವ ಹಕ್ಕುಗಳ ಹೋರಾಟಗಾರ ಮತ್ತು ಜೆಸ್ಯೂಟ್ ಪಾದ್ರಿ ಫಾದರ್ ಸ್ಟಾನ್ ಸ್ವಾಮಿ ಅವರ ಸಾವು ತೀವ್ರ ನೋವುಂಟು ಮಾಡಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.

ಜಿನಿವಾ: ಜೈಲಿನಲ್ಲಿದ್ದ 84 ವರ್ಷದ ಮಾನವ ಹಕ್ಕುಗಳ ಹೋರಾಟಗಾರ ಮತ್ತು ಜೆಸ್ಯೂಟ್ ಪಾದ್ರಿ ಫಾದರ್ ಸ್ಟಾನ್ ಸ್ವಾಮಿ ಅವರ ಸಾವು ತೀವ್ರ ನೋವುಂಟು ಮಾಡಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ. ಉಗ್ರ ವಿರೋಧಿ ಕಾನೂನಿನ ಅಡಿಯಲ್ಲಿ 9 ತಿಂಗಳ ಹಿಂದೆ ವಿಚಾರಣೆ ಇಲ್ಲದೆ ಬಂಧಿಸಲಾಗಿದ್ದ ಸ್ವಾಮಿ, ಸೋಮವಾರ ಜೈಲಿನಲ್ಲಿಯೇ ಸಾವನ್ನಪ್ಪಿದ್ದರು.

ಸ್ಟಾನ್ ಸ್ವಾಮಿ ಅಲ್ಪಸಂಖ್ಯಾತ ಬುಡಕಟ್ಟು ಸಮುದಾಯದವರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು. 2018ರಲ್ಲಿ ವಿವಿಧ ಜಾತಿಗಳ ನಡುವಣ ಹಿಂಸಾಚಾರ ಆರೋಪದ ಮೇರೆಗೆ ಕಳೆದ ವರ್ಷ ಅವರನ್ನು ಬಂಧಿಸಲಾಗಿತ್ತು.

84 ವರ್ಷದ ಫಾದರ್ ಸ್ಟಾನ್ ಸ್ವಾಮಿ ನಿಧನದಿಂದ ತೀವ್ರ ದು:ಖ ಮತ್ತು ಆಘಾತವಾಗಿದೆ ಎಂದು ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಹೈ ಕಮೀಷನರ್ ಕಚೇರಿ ವಕ್ತಾರ ಲಿಜ್ ತ್ರೊಸ್ಸೆಲ್ ಹೇಳಿದ್ದಾರೆ. ಪಾರ್ಕಿನ್ ಸನ್ಸ್ ಸೇರಿದಂತೆ ಮತ್ತಿತರ ರೋಗಗಳಿಂದ ನರಳುತ್ತಿದ್ದರೂ ಸ್ವಾಮಿ ಅವರಿಗೆ ಜಾಮೀನು ನೀಡಿರಲಿಲ್ಲ. ಕೊರೋನಾವೈರಸ್ ಕಾರಣದಿಂದ ಮೇ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕಳೆದೊಂದು ವಾರದಿಂದ ಎದೆನೋವಿನಿಂದ ಬಳಲುತ್ತಿದ್ದರು.

ಹೋರಾಟಗಾರರು, ವಿದ್ಯಾರ್ಥಿಗಳು, ಪತ್ರಕರ್ತರು ಮತ್ತಿತರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕಾನೂನನ್ನು ಬಳಸುತ್ತಿದೆ. ಪಾಧರ್ ಸ್ಟಾನ್ ಸ್ವಾಮಿ ಸೇರಿದಂತೆ ಮತ್ತಿತರ ಬಂಧನದ ಬಗ್ಗೆ ಹೈಕಮೀಷನರ್ ಮಿಚೆಲ್ ಬಚೆಲೆಟ್ ಮತ್ತು ವಿಶ್ವಸಂಸ್ಥೆಯ ಸ್ವತ್ರಂತ್ರ ತಜ್ಞರು ಪದೇ ಪದೇ ಪ್ರಶ್ನಿಸುತ್ತಿದ್ದಲ್ಲದೇ, ಅವರನ್ನು ಬಿಡುಗಡೆ ಮಾಡುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾಗಿ ಅವರು ತ್ರೊಸ್ಸೆಲ್ ಹೇಳಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಸಭೆ ಮತ್ತು ಸಂಘದ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಯಾರನ್ನೂ ಬಂಧನಕ್ಕೊಳಗಾಗದಂತೆ ನೋಡಿಕೊಳ್ಳಬೇಕೆಂದು ಭಾರತ ಸರ್ಕಾರಕ್ಕೆ ಒತ್ತಿ ಹೇಳಿರುವುದಾಗಿ ತ್ರೋಸ್ಸೆಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT