ದೇಶ

ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಎಲ್‌ಇಟಿ ಉಗ್ರನ ಬಂಧನ

Raghavendra Adiga

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಉಗ್ರನನ್ನು ಭದ್ರತಾ ಪಡೆ ಶುಕ್ರವಾರ ಬಂಧಿಸಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಹಾಜಿನ್ ಪಟ್ಟಣದಲ್ಲಿ ಭಯೋತ್ಪಾದಕರ ಚಲನವಲನಕ್ಕೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿಯ ಮೇರೆಗೆ, ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ಚೆಕ್‌ಪಾಯಿಂಟ್ ಅನ್ನು ಹಾಜಿನ್‌ನ ಗುಂಡ್‌ಜಹಂಗರ್ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ತಪಾಸಣೆ ಮಾಡುವಾಗ, ಒಬ್ಬ ವ್ಯಕ್ತಿ ಬಹಳ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. "ಅವನನ್ನು ಹಾಜೀನ್‌ನ ಚಂದರ್‌ಗೀರ್ ನಿವಾಸಿ ಮುಜಮ್ಮಿಲ್ ಶೇಖ್ ಅಲಿಯಾಸ್ ಅಬು ಮಾವಿಯಾ ಎಂದು ಗುರುತಿಸಲಾಗಿದೆ. ಅವನ ವೈಯಕ್ತಿಕ ಶೋಧದ ಸಮಯದಲ್ಲಿ, ಒಂದು ಚೀನೀ ಪಿಸ್ತೂಲ್ ಸೇರಿದಂತೆ ಜೀವಂತ ಗುಂಡುಗಳು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪತ್ತೆ ಮಾಡಲಾಗಿದೆ.

ಬಂಧಿತ ವ್ಯಕ್ತಿಯು ಇತ್ತೀಚೆಗೆ ನಿಷೇಧಿತ ಎಲ್‌ಇಟಿಗೆ ಸೇರ್ಪಡೆಗೊಂಡಿದ್ದು, ಹಾಜಿನ್ ಪಟ್ಟಣ ಮತ್ತು ಸುತ್ತಮುತ್ತಲಿನ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಕಾರ್ಯವನ್ನು ವಹಿಸಿಕೊಂಡಿದ್ದ ಎಂದು ಅವರು ಹೇಳಿದರು.

SCROLL FOR NEXT