ದೇಶ

ಜುಲೈ 22 ರಿಂದ ಸಂಸತ್ ಭವನದ ಬಳಿ 200 ರೈತರ ಪ್ರತಿಭಟನೆ: ಟಿಕಾಯತ್

Nagaraja AB

ನವದೆಹಲಿ: ಕೇಂದ್ರದ ನೂತನ ಕೃಷಿ ಕಾನೂನುಗಳ ರದ್ಧತಿ ನಿಟ್ಟಿನಲ್ಲಿ ಇದೇ 22 ರಿಂದ ಸಂಸತ್ ಬಳಿ 200 ರೈತರಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ ಲೀಡರ್ ರಾಕೇಶ್ ಟಿಕಾಯತ್ ಶನಿವಾರ ಮಾಹಿತಿ ನೀಡಿದ್ದಾರೆ. 

ಬೇರೆ ಆಯ್ಕೆ ಬಗ್ಗೆ ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧವಿದೆ ಎಂಬ ಕೇಂದ್ರ ಕೃಷಿ ಸಚಿವ ಟಿಕಾಯತ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಟಿಕಾಯತ್, ಕೃಷಿ ಕಾನೂನುಗಳ ಕುರಿತು ಸರ್ಕಾರದೊಂದಿಗೆ ಮಾತುಕತೆಗೆ ರೈತರು ಸಿದ್ಧ. ಆದರೆ, ಯಾವುದೇ ಷರತ್ತಿಲ್ಲದೆ ಚರ್ಚೆ ನಡೆಯಬೇಕೆಂದು ಸ್ಪಷ್ಟಪಡಿಸಿದರು. 

ಕೃಷಿ ಕಾನೂನುಗಳ ವಿಚಾರವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗುವುದಾಗಿ ನಾವು ಹೇಳಿಲ್ಲ.  ಜನವರಿ 26 ರ ಗಣರಾಜ್ಯೋತ್ಸವ ದಿನಾಚರಣೆಯಂದು ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದೇವೆ. ತಾರತಾಮ್ಯವಿಲ್ಲದೆ ವಿಚಾರಣೆ ನಡೆಸುವ ಏಜೆನ್ಸಿ ಇದ್ದರೆ? ಈ ವಿಚಾರವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಟಿಕಾಯತ್ ಹೇಳಿದರು. 

SCROLL FOR NEXT