ದೇಶ

ವಿಯೆಟ್ನಾಂ ಪ್ರಧಾನಿ ಜತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ

Nagaraja AB

ನವದೆಹಲಿ: ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮಾತುಕತೆ ನಡೆಸಿದರು. ವಿಯೆಟ್ನಾಂನ ನೂತನ  ಪ್ರಧಾನಿಯಾಗಿ ಆಯ್ಕೆಯಾಗಿರುವ ಫಾಮ್ ಮಿನ್ಹ್ ಚಿನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಅಭಿನಂದಿಸಿದರು. 

ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ಕುರಿತು ಎರಡೂ ದೇಶಗಳ ಪ್ರಧಾನಿಗಳು ಚರ್ಚಿಸಿದ್ದಾರೆ. ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಫಾಮ್ ಮಿನ್ಹ್ ಚಿನ್ ಅವರಿಗೆ ಆಹ್ವಾನ ನೀಡಿದರು.

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಸಹಾಯ, ಸಹಕಾರ ಮುಂದುವರಿಸಬೇಕೆಂದು ಉಭಯ ಪ್ರಧಾನ ಮಂತ್ರಿಗಳು ನಿರ್ಧರಿಸಿದರು. ಭಾರತ ಹಾಗೂ ವಿಯೆಟ್ನಾಂ ಎರಡೂ  ದೇಶಗಳು ಪ್ರಸ್ತುತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಎಂಬುದನ್ನು  ಪ್ರಧಾನಿ ನರೇಂದ್ರ ಮೋದಿ ನೆನಪಿಸಿದರು. 

2022 ರ ವೇಳೆಗೆ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಗೊಂಡ  50 ವರ್ಷಗಳು  ತುಂಬುತ್ತಿದ್ದು, ಈ ಅಂಗವಾಗಿ ಭವ್ಯವಾದ ಸಮಾರಂಭ ಆಯೋಜಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿಯೆಟ್ನಾಂ ಪ್ರಧಾನಿ ಜೊತೆ ಪ್ರಸ್ತಾಪಿಸಿದರು. 

SCROLL FOR NEXT