ದೇಶ

ಉತ್ತರಾಖಂಡ್ ಚುನಾವಣೆ: ಉಚಿತ ವಿದ್ಯುತ್, ರೈತರ ವಿದ್ಯುತ್ ಶುಲ್ಕ ಮನ್ನಾ ಭರವಸೆ ನೀಡಿದ ಕೇಜ್ರಿವಾಲ್

Srinivas Rao BV

ಡೆಹ್ರಾಡೂನ್: ಉತ್ತರಾಖಂಡ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ ಹಲವು ಭರವಸೆಗಳನ್ನು ರಾಜ್ಯದ ಜನತೆಗೆ ನೀಡಿದೆ.

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಉತ್ತರಾಖಂಡ್ ನ ಜನತೆಗೆ ಹಲವು ಭರವಸೆಗಳನ್ನು ನೀಡಿದ್ದು, ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲಿನ ನಗರ ಪ್ರದೇಶದಲ್ಲಿರುವ ಜನತೆಗೆ 300 ಯುನಿಟ್ ಗಳಷ್ಟು ಉಚಿತ ವಿದ್ಯುತ್ ನ್ನು ಪೂರೈಕೆ ಮಾಡುವುದಾಗಿ ಘೋಷಿಸಿದ್ದಾರೆ.

"ನಾವು ಅಧಿಕಾರಕ್ಕೆ ಬಂದು ನಂತರದ ದಿನಗಳಲ್ಲಿ, ಹಿಂದೆ ನೀಡಿದ್ದ ಭರವಸೆಗಳನ್ನು ಮರೆಯುವವರಲ್ಲ" ಎಂದು ಕೇಜ್ರಿವಾಲ್ ಹೇಳಿದ್ದಾರೆ. ರೈತರಿಗೂ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿರುವ ಕೇಜ್ರಿವಾಲ್, ಬಾಕಿ ಇರುವ ಅವರ ವಿದ್ಯುತ್ ಬಿಲ್ ನ್ನು ಮನ್ನಾ ಮಾಡುವುದಾಗಿಯೂ ಹೇಳಿದ್ದಾರೆ.

"ರೈತರು ಅತ್ಯಂತ ಬಡವರಾಗಿದ್ದು, ಅವರಿಂದಲೂ ವಿದ್ಯುತ್ ಶುಲ್ಕ ಪಡೆಯುತ್ತಿದ್ದೇವೆ. ಈ ರೀತಿ ಮಾಡಿದರೆ, ರೈತರಿಗೆ ಅವರ ಕುಟುಂಬದ ಕ್ಷೇಮ ಹಾಗೂ ಮಕ್ಕಳಿಗಾಗಿ ಸಾಕಷ್ಟು ಖರ್ಚು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿರುವ ಕೇಜ್ರಿವಾಲ್, ವಿದ್ಯುತ್ ಬಿಲ್ ಗಳಲ್ಲಿ ಭ್ರಷ್ಟಾಚಾರಗಳನ್ನು ನೋಡುತ್ತಿದ್ದೇವೆ. ಆಪ್ ಅಧಿಕಾರಕ್ಕೆ ಬಂದಲ್ಲಿ ಸ್ರೈತರು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಗಳನ್ನು ಮನ್ನಾ ಮಾಡಲಾಗುತ್ತದೆ" ಎಂದು  ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ಎರಡನೇ ಬಾರಿಗೆ ಆಯ್ಕೆಯಾದಾಗ ಆಪ್ ಶಾಸಕರು ಲೈನ್ ಬೈ ಲೈನ್ ತೆರಳಿ ವಿದ್ಯುತ್ ತಂತಿ, ಟ್ರಾನ್ಸ್ಫಾರ್ಮಗಳನ್ನು ಕೂಲಂಕುಷ ಪರೀಕ್ಷೆ ನಡೆಸಿದ್ದರು. ಈಗ ದೆಹಲಿಯ ಜನತೆ ಇನ್ವರ್ಟರ್ ಗಳು ಹಾಗೂ ಜನರೇಟರ್ ಗಳನ್ನು ಬಳಕೆ ಮಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲೂ ಉಚಿತ ವಿದ್ಯುತ್ ನೀಡಿದ್ದೇವೆ ಉತ್ತರಾಖಂಡ್ ನಲ್ಲಿಯೂ ಇದನ್ನೇ ಮಾಡುತ್ತೇವೆ ಇದಕ್ಕಾಗಿ ರಾಜ್ಯದ ಬಜೆಟ್ ನಲ್ಲಿ 1,200 ಕೋಟಿಯಿಂದ 50,000 ಕೋಟಿ ರೂಪಾಯಿಗಳವರೆಗೆ ಖರ್ಚಾಗಲಿದೆ, ದೇಶದಲ್ಲಿ ಕೊರತೆ ಇಲ್ಲದ ಸರ್ಕಾರ ಎಂದರೆ ಅದು ದೆಹಲಿ ಸರ್ಕಾರ ಎಂದು ಸಿಎಜಿ ವರದಿ ಹೇಳುತ್ತದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಆಮ್ ಆದಿ ಪಕ್ಷಕ್ಕೆ ಅಧಿಕಾರ ದೊರೆತಲ್ಲಿ ಉತ್ತರಾಖಂಡ್ ಜನತೆಗೆ ಉಚಿತ ವಿದ್ಯುತ್ ನೀಡಲು ಹೊಸ ತೆರಿಗೆ ಹಾಕುವುದಿಲ್ಲ ಎಂದೂ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

SCROLL FOR NEXT