ನಟ ಸುನೀಲ್ ಶೆಟ್ಟಿ 
ದೇಶ

ಕೋವಿಡ್ ಪ್ರಕರಣಗಳ ಹೆಚ್ಚಳ: ನಟ ಸುನೀಲ್ ಶೆಟ್ಟಿಗೆ ಸೇರಿದ ಕಟ್ಟಡ ಸೀಲ್ ಮಾಡಿದ ಬಿಎಂಸಿ

ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಕಟ್ಟಡವನ್ನು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಸೀಲ್ ಮಾಡಿದೆ.

ಮುಂಬೈ: ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಕಟ್ಟಡವನ್ನು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಸೀಲ್ ಮಾಡಿದೆ.

ದಕ್ಷಿಣ ಮುಂಬೈಯ ಅಲ್ಟಾಮೌಂಟ್ ರಸ್ತೆಯ ಪೃಥ್ವಿ ಅಪಾರ್ಟ್ ಮೆಂಟ್ ಕಟ್ಟಡದಲ್ಲಿ ಸುನೀಲ್ ಶೆಟ್ಟಿ ವಾಸಿಸುತ್ತಿದ್ದಾರೆ. ಆದರೆ, ಈ ಕಟ್ಟಡದಲ್ಲಿ 5ಕ್ಕಿಂತ ಹೆಚ್ಚಿನ ಸೋಂಕು ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆ ಕಟ್ಟಡವನ್ನು ಬಿಎಂಸಿ ಸೀಲ್ ಮಾಡಿದೆ.

ಪೃಥ್ವಿ ಅಪಾರ್ಟ್ ಮೆಂಟ್ ಸೀಲ್ ಮಾಡಲಾಗಿದ್ದು, ಜನರಿಗೆ ಬರಲು ಅವಕಾಶ ಇರುವುದಿಲ್ಲ. ಈಗಿನಿಂದ ಕಟ್ಟಡದ ಹೊರಗಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಆದ್ದರಿಂದ ಯಾವೊಬ್ಬ ವ್ಯಕ್ತಿಯನ್ನು ಕಟ್ಟಡದ ಹೊರಗಡೆಯ ಆವರಣಕ್ಕೆ ಕರೆಯುವುದಕ್ಕೆ ಆಗುವುದಿಲ್ಲ ಎಂದು ಬಿಎಂಸಿಯ ಸಹಾಯಕ ಕಮೀಷನರ್ ಪ್ರಶಾಂತ್ ಗಾಯಕ್ ವಾಡ್ ಸೋಮವಾರ ತಿಳಿಸಿದ್ದಾರೆ. 

ಪೃಥ್ವಿ ಅಪಾರ್ಟ್ ಮೆಂಟ್ ನ 18ನೇ ಅಂತಸ್ತಿನಲ್ಲಿ ನಟ ಸುನೀಲ್ ಶೆಟ್ಟಿಯ ಇಡೀ ಕುಟುಂಬ ವಾಸಿಸುತ್ತಿದೆ. ಈಗ ಸುನೀಲ್ ಶೆಟ್ಟಿಯ ಇಡೀ ಕುಟುಂಬ ಸುರಕ್ಷಿತವಾಗಿದೆ. ಅವರಿಗೆ ಏನೂ ಆಗಲ್ಲ. ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ. ಬಿಎಂಸಿ ಮಾರ್ಗಸೂಚಿ ಅನ್ವಯ 5ಕ್ಕಿಂತ ಹೆಚ್ಚಿನ ಪ್ರಕರಣಗಳು ಕಂಡುಬಂದ ಯಾವುದೇ ಕಟ್ಟಡವನ್ನು ಸೂಕ್ಷ್ಮ ಕಂಟೈನ್ ಮೆಂಚ್ ವಲಯ ಎಂದು ಘೋಷಿಸಿ ಸೀಲ್ ಮಾಡಲಾಗುವುದು ಎಂದು ಗಾಯಕ್ ವಾಡ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT