ದೇಶ

ಕಾಶ್ಮೀರದಲ್ಲಿ ಎನ್‍ಐಎ ದಾಳಿ: ಇಸಿಸ್ ಪರ ಪ್ರಚಾರ ಮಾಡುತ್ತಿದ್ದ ಐವರ ಬಂಧನ

Srinivasamurthy VN

ಶ್ರೀನಗರ: ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಜಮ್ಮು ಮತ್ತು ಕಾಶ್ಮೀರದಾದ್ಯಂತ ಅನೇಕ ಕಡೆ ದಾಳಿಗಳನ್ನು ನಡೆಸಿದ್ದು, ಈ ವರೆಗೂ ಐವರನ್ನು ಬಂಧಿಸಲಾಗಿದೆ.

ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಅರೆಸೈನಿಕ ಪಡೆಗಳ ಸಹಾಯದೊಂದಿಗೆ ಎನ್‍ ಐಎ ಅಧಿಕಾರಿಗಳು ಅನಂತನಾಗ್‍, ಶ್ರೀನಗರ ಮತ್ತು ಬರಾಮುಲ್ಲಾ ಜಿಲ್ಲೆಗಳಲ್ಲಿ ಆರು ಕಡೆ ದಾಳಿ ನಡೆಸಿದ್ದು, ಈವರೆಗೆ ಅನಂತನಾಗ್ ನಲ್ಲಿ ನಾಲ್ವರು, ಶ್ರೀನಗರದಲ್ಲಿ ಓರ್ವನನ್ನು ಬಂಧಿಸಲಾಗಿದೆ. ಇನ್ನೂ ಕೆಲ ಕಡೆ ದಾಳಿ  ಮುಂದುವರದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಮ್ಮು-ಕಾಶ್ಮೀರದಲ್ಲಿ ಯುವಕರನ್ನು ಭಯೋತ್ಪಾದನೆಗೆ ಸೆಳೆಯಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಹತ್ತು ದಿನಗಳ ಹಿಂದೆ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಈ ಐವರನ್ನು ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆನ್‍ ಲೈನ್‍ ಮೂಲಕ ಭಯೋತ್ಪಾದನೆಗೆ ಯುವಕರನ್ನು  ಸೇರಿಸಿಕೊಳ್ಳುತ್ತಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ವಿದೇಶಗಳೊಂದಿಗೆ ಬಂಧಿತರು ಹೊಂದಿರುವ ನಂಟು ಕುರಿತು ತನಿಖೆ ನಡೆಸಲಾಗುತ್ತಿದೆ.

ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಹಿಜ್ಬುಲ್ ಮುಜಾಹಿದ್ದೀನ್‍ ಮುಖ್ಯಸ್ಥ ಸಲಾಹುದ್ದೀನ್ ನ ಇಬ್ಬರು ಪುತ್ರರರನ್ನು ಬಂಧಿಸಿ 11 ಸರ್ಕಾರಿ ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
 

SCROLL FOR NEXT