ದೇಶ

ಅಫ್ಘಾನಿಸ್ತಾನದ ಭವಿಷ್ಯ ಅದರ ಭೂತಕಾಲದಂತಿರಲು ಸಾಧ್ಯವಿಲ್ಲ: ವಿದೇಶಾಂಗ ಸಚಿವ ಎಸ್ ಜೈಶಂಕರ್ 

Srinivas Rao BV

ನವದೆಹಲಿ: ಅಫ್ಘಾನಿಸ್ತಾನದ ಭವಿಷ್ಯ ಅದರ ಭೂತಕಾಲದಂತಿರಲು ಸಾಧ್ಯವಿಲ್ಲ, ಅಧಿಕಾರವನ್ನು ಹಿಂಸಾಚಾರ ಮತ್ತು ಬಲಪ್ರಯೋಗದಿಂದ ಕಸಿಯುವುದಕ್ಕೆ ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಹಲವು ಪ್ರದೇಶಗಳಲ್ಲಿ ನಿಯಂತ್ರಣ ಸಾಧಿಸುತ್ತಿರುವ ಬೆನ್ನಲ್ಲೇ  ನ ಎಸ್ ಸಿಒ ದ ಪ್ರಮುಖ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಜೈಶಂಕರ್, ಆಫ್ಘಾನಿಸ್ತಾನದ ನೆರೆ ರಾಷ್ಟ್ರಗಳಿಗೆ ಭಯೋತ್ಪಾದನೆ, ಪ್ರತ್ಯೇಕತೆ, ಉಗ್ರವಾದದಿಂದ ಬಾಧಿತರಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. 

ಆಫ್ಘಾನಿಸ್ತಾನದಲ್ಲಿ ಅಮೆರಿಕಾದ ಸೇನೆ ಸಂಪೂರ್ಣವಾಗಿ ಹಿಂತಿರುಗುತ್ತಿರುವುದರ ನಂತರ ಜಾಗತಿಕ ಮಟ್ಟದಲ್ಲಿ ಆತಂಕ ಉಂಟಾಗಿರುವುದರ ನಡುವೆ ಈ ಸಭೆ ನಡೆದಿದೆ. 

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ, ಅಫಘಾನ್ ವಿದೇಶಾಂಗ ಸಚಿವ ಮೊಹಮ್ಮದ್ ಹನೀಫ್ ಆತ್ಮರ್ ಸಭೆಯಲ್ಲಿ ಭಾಗವಹಿಸಿದ್ದರು. 

ಆಫ್ಘಾನಿಸ್ತಾನದಲ್ಲಿ ಭಾರತದ ದೃಷ್ಟಿಕೋನವನ್ನು ಮಂಡಿಸಿರುವ ಜೈಶಂಕರ್, ಜಗತ್ತು ಹಾಗೂ ಆಫ್ಘಾನ್ ಜನತೆ ಸ್ವತಂತ್ರ, ತಟಸ್ಥ, ಏಕೀಕೃತ, ಶಾಂತಿಯುತ, ಪ್ರಜಾಪ್ರಭುತ್ವ ಹಾಗೂ ಸಮೃದ್ಧ ರಾಷ್ಟ್ರವನ್ನು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. 

SCROLL FOR NEXT