ಕೋವಿಡ್ ಲಸಿಕೆ ಮತ್ತು ಗರ್ಭಿಣಿ ಮಹಿಳೆ 
ದೇಶ

ಇಂದಿನಿಂದ ಮುಂಬೈನಲ್ಲಿ ಗರ್ಭಿಣಿಯರಿಗೂ ಕೊರೋನಾ ಲಸಿಕೆ ವಿತರಣೆ

ಕೋವಿಡ್ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕಾ ಅಭಿಯಾನ ಚುರುಕು ಪಡೆದಿದ್ದು, ಜುಲೈ 15ರಿಂದ ಅಂದರೆ ಇಂದಿನಿಂದಲೇ ಗರ್ಭಿಣಿಯರಿಗೂ ಕೋವಿಡ್ ಲಸಿಕೆ ವಿತರಿಸಲಾಗುತ್ತದೆ.

ಮುಂಬೈ: ಕೋವಿಡ್ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕಾ ಅಭಿಯಾನ ಚುರುಕು ಪಡೆದಿದ್ದು, ಜುಲೈ 15ರಿಂದ ಅಂದರೆ ಇಂದಿನಿಂದಲೇ ಗರ್ಭಿಣಿಯರಿಗೂ ಕೋವಿಡ್ ಲಸಿಕೆ ವಿತರಿಸಲಾಗುತ್ತದೆ.

ಹೌದು.. ಬೃಹನ್ ಮುಂಬೈ ಮಹಾನಗರದ ಪೌರಾಡಳಿತವು ಗರ್ಭಿಣಿ ಮಹಿಳೆಯರಿಗೆ ಕೊವಿಡ್​-19 ಲಸಿಕೆ ನೀಡುವ ವಿಶೇಷ ಆಭಿಯಾನವನ್ನು ಗುರುವಾರದಿಂದ ಆರಂಭಿಸಲಿದೆ. ಜುಲೈ 15ರಿಂದ ಆರಂಭಗೊಳ್ಳುವ ಈ ಅಭಿಯಾನವು ನಗರದಾದ್ಯಂತ ಇರುವ 35 ಲಸಿಕಾ ಕೇಂದ್ರಗಳ ಪೈಕಿ ಒಂದರಲ್ಲಿ  ಆರಂಭವಾಗಲಿದೆ. ಅದಕ್ಕಾಗಿ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ ಎನ್ನಲಾಗಿದೆ. ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವ ಅಂಶ ಹಲವಾರು ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರು ಮತ್ತು ಶಿವ ಸೇನೆ ಪಕ್ಷದ ಸಂಸದೆ ಪ್ರಿಯಾಂಕಾ ಚತುರ್ವೇದಿ ಮುನ್ನೆಲೆಗೆ ತಂದಿದ್ದರು. ಈ ಹಿಂದೆ ಮಾತಾಡಿದ್ದ  ಪ್ರಿಯಾಂಕಾ ಅವರು, ‘ಕೇವಲ ಜೈವಿಕ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯರನ್ನು ಯಾಕೆ ಲಸಿಕೆ ಹಾಕಿಸಿಕೊಳ್ಳುವುದರಿಂದ ತಡೆಯಬೇಕು,’ ಎಂದು ಪ್ರಶ್ನಿಸಿದ್ದರು.

ಮೇ ತಿಂಗಳವರೆಗೆ ಎದೆ ಹಾಲುಣಿಸುವ ಮಹಿಳೆಯರು ಲಸಿಕೆ ಪಡೆಯಲು ಅರ್ಹರು ಎಂದಾದರೆ ಗರ್ಭಿಣಿಯರು ಏಕೆ ಅಲ್ಲ ಎನ್ನುವ ಟೀಕೆ ಕೇಳಿಬಂದಿತ್ತು. ಗರ್ಭಿಣಿ ಮಹಿಳೆಯರ ಮೇಲೆ ಲಸಿಕೆಯ ಕ್ಲಿನಿಕಲ್ ಟ್ರಯಲ್​ಗಳು ನಡೆದಿಲ್ಲ ಮತ್ತು ಅವರಿಗೆ ಲಸಿಕೆ ನೀಡದರೆ ಆಗಬಹದಾದ ಅಡ್ಡ ಪರಿಣಾಮಗಳು ಮತ್ತು ಅದು  ಅವರಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿ ಎನ್ನುವ ಬಗ್ಗೆ ಮಾಹಿತಿ ಲಭ್ಯವಿಲ್ಲದ ಕಾರಣ ಅವರನ್ನು ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಜೂನ್​ನಲ್ಲಿ ನಿಲುವು ಬದಲಿಸಿದ ಕೇಂದ್ರ ಅರೋಗ್ಯ ಸಚಿವಾಲಯವು, ಗರ್ಭಿಣಿ ಮಹಿಳೆಯರು ಲಸಿಕೆಯನ್ನು ಹಾಕಿಸಿಕೊಳ್ಳಲೇ ಬೇಕು ಎಂದು  ಹೇಳಿತು. ಮಾರಣಾಂತಿಕ ಸೋಂಕಿನಿಂದ ಲಸಿಕೆ ಮೂಲಕ ರಕ್ಷಣೆ ಪಡೆಯುವ ಅಧಿಕಾರ ಮತ್ತು ಹಕ್ಕು ಅವರಿಗಿದೆಯೆಂದು ಇಲಾಖೆ ಹೇಳಿತ್ತು.

ಈ ಕುರಿತಂತೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಭಾರತದ ವೈದ್ಯಕೀಯ ಸಂಶೋಧನೆ ಕೌನ್ಸಿಲ್​ನ ಮಹಾ ನಿರ್ದೇಶಕ ಡಾ ಬಲರಾಮ ಭಾರ್ಗವ ಅವರು, 'ಆರೋಗ್ಯ ಸಚಿವಾಲಯವು, ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಬಹುದಾದ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅವರಿಗೆ ಲಸಿಕೆ  ಪ್ರಯೋಜನಕಾರಿಯಾಗಿದೆ ಮತ್ತು ಅದನ್ನು ನೀಡಲೇಬೇಕು ಎಂದು ಹೇಳಿದ್ದರು. 

ಇನ್ನು ಮುಂಬೈ ಮಹಾನಗರದಲ್ಲಿ ಬುಧವಾರದವರೆಗೆ ಒಟ್ಟು 62,33,629 ಡೋಸ್ ಕೊರೋನವೈರಸ್ ಲಸಿಕೆ ನೀಡಲಾಗಿದ್ದು, ಈ ಪೈಕಿ 13,68,580 ಫಲಾನುಭವಿಗಳು ಎರಡನೇ ಡೋಸ್ ಪಡೆದಿದ್ದಾರೆ ಎಂದು ಬಿಎಂಸಿ ತಿಳಿಸಿದೆ. ಪ್ರಸ್ತುತ, ಮುಂಬೈ 407 ಸಕ್ರಿಯ ಸಿಒವಿಐಡಿ -19 ವ್ಯಾಕ್ಸಿನೇಷನ್ ಕೇಂದ್ರಗಳನ್ನು  ಹೊಂದಿದ್ದು, ಬಿಎಂಸಿಯ 286, ಮಹಾರಾಷ್ಟ್ರ ಸರ್ಕಾರ ನಡೆಸುತ್ತಿರುವ 20 ಮತ್ತು 101 ಖಾಸಗಿ ಲಸಿಕಾ ಕೇಂದ್ರಗಳಿವೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

SCROLL FOR NEXT