ದೇಶ

ಕೇರಳದಲ್ಲಿ ಜಿಕಾ ವೈರಸ್ ಪ್ರಕರಣಗಳ ಸಂಖ್ಯೆ 35ಕ್ಕೆ ಏರಿಕೆ

Srinivas Rao BV

ತಿರುವನಂತಪುರಂ: ಕೇರಳದಲ್ಲಿ ಜಿಕಾ ವೈರಸ್ ನ 5 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಈ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 35ಕ್ಕೆ ಏರಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ತಿಳಿಸಿದ್ದಾರೆ."

35 ಪ್ರಕರಣಗಳ ಪೈಕಿ 24 ಜನರಿಗೆ ಪರೀಕ್ಷೆಯಲ್ಲಿ ನೆಗೆಟೀವ್ ವರದಿಯಾಗಿದೆ. ಉಳಿದವರು ವೈದ್ಯಕೀಯ ಪರಿವೀಕ್ಷಣೆಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ. 
 
ಈ ಮೊದಲು ಮೊದಲ ಬಾರಿಗೆ 24 ವರ್ಷದ ಗರ್ಭಿಣಿಯಲ್ಲಿ ಜಿಕಾ ವೈರಸ್ ಸೋಂಕು ಕಂಡುಬಂದಿತ್ತು. ನಂತರ ಖಾಸಗಿ ಆಸ್ಪತ್ರೆಯಲ್ಲಿ ಆರು ದಿನಗಳಲ್ಲಿ ಮಹಿಳೆ ಚೇತರಿಸಿಕೊಂಡು ಆರೋಗ್ಯವಂತ ಮಗುವಿಗೆ ಜನ್ಮನೀಡಿದ್ದರು. ಕೋವಿಡ್ ಸಾಂಕ್ರಾಮಿಕ ನಡುವೆ ರಾಜ್ಯದಲ್ಲಿ ಇದೀಗ ಜಿಕಾ ವೈರಸ್ ರೋಗ ಆತಂಕವನ್ನುಂಟುಮಾಡಿದೆ.

SCROLL FOR NEXT