ದೇಶ

ಅಮರೀಂದರ್ ಸಿಂಗ್ ಗೆ ನಿರಾಸೆಗೊಳಿಸಬೇಡಿ- ಪಂಜಾಬ್ ಕಾಂಗ್ರೆಸ್ ಶಾಸಕರು

Nagaraja AB

ಚಂಡೀಘಡ: ಈಗಲೂ ಪಂಜಾಬಿನ ಜನ ಸಮುದಾಯದ ದೊಡ್ಡ ನಾಯಕರಾಗಿರುವ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರಿಗೆ ನಿರಾಸೆಗೊಳಿಸದಂತೆ ಕಾಂಗ್ರೆಸ್ ಪಕ್ಷದ ಹತ್ತು ಶಾಸಕರು ಹೈಕಮಾಂಡ್ ನ್ನು ಒತ್ತಾಯಿಸಿದ್ದಾರೆ. 

ದಾರ್ಬರ್ ಸಾಹಿಬ್ ನಲ್ಲಿ 1984ರಲ್ಲಿ ನಡೆದ ದಾಳಿ ಹಾಗೂ ತದನಂತರ ದೆಹಲಿ ಮತ್ತಿತರ ಕಡೆಗಳಲ್ಲಿ ಸಿಖ್ ಸಮುದಾಯದ ಮೇಲೆ ದಾಳಿ ನಡೆದ ನಂತರ ಪಂಜಾಬ್ ನಲ್ಲಿ ಅಮರೀಂದರ್ ಸಿಂಗ್ ಅವರಿಂದ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಗಿದೆ ಎಂದು ಶಾಸಕರು ಹೇಳಿದ್ದಾರೆ.

ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವುದರಲ್ಲಿ ಅನುಮಾನವಿಲ್ಲ ಆದರೆ, ಇದೇ ವೇಳೆ, ಕಳೆದ ಕೆಲ ತಿಂಗಳುಗಳಿಂದ ಸಾರ್ವಜನಿಕರಲ್ಲಿ ಮೂಡಿರುವ ಕೆಟ್ಟ ಅಭಿಪ್ರಾಯವನ್ನು ಹೋಗಲಾಡಿಸಬೇಕಾಗಿದೆ ಎಂದು ಮುಖಂಡರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿನ ವಿವಿಧ ವರ್ಗಗಳಲ್ಲಿ ಅಮರೀಂದರ್ ಸಿಂಗ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ವಿಶೇಷವಾಗಿ ರೈತರಲ್ಲಿಯೂ ವಿಶೇಷ ಅಭಿಮಾನವಿದೆ. ಎಂತಹ ಸಂದರ್ಭದಲ್ಲಿಯೂ ತತ್ವಸಿದ್ಧಾಂತ ಬಿಡದ ಅಮರೀಂದರ್ ಸಿಂಗ್ ಈಗಲೂ ಸಿಖ್ ಸಮುದಾಯದಲ್ಲಿ ದೊಡ್ಡ ನಾಯಕರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಗುರು ಗ್ರಂಥ ಸಾಹೀಬ್ ಅವರ ಅಪವಿತ್ರತೆ ಮತ್ತು 2015 ರ ನಂತರದ ಪೊಲೀಸ್ ಗುಂಡು ಹಾರಿಸಿದ ಪ್ರಕರಣದಲ್ಲಿ ನ್ಯಾಯ ಒದಗಿಸುವಲ್ಲಿ ವಿಳಂಬವಾಗಿದೆ ಎಂದು ಆರೋಪಿಸಿ ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಬದಲು ಬಾದಲ್ ರಾಜ್ಯವನ್ನು ಆಳುತ್ತಿದ್ದಾರೆ ಎಂಬ ಅನುಮಾನ ಶಾಸಕರಲ್ಲಿ ಮೂಡಿದೆ ಎಂದು ಅವರು ಆರೋಪಿಸಿದ್ದಾರೆ. 

ವಿಧಾನಸಭಾ ಚುನಾವಣೆಗೆ ಇನ್ನೂ  ಕೇವಲ ಆರು ತಿಂಗಳುಗಳು ಬಾಕಿ ಇರುವುದರಿಂದ, ಪಕ್ಷವನ್ನು ಬೇರೆ ಬೇರೆ ದಿಕ್ಕಿಗೆ ಎಳೆಯುವುದರಿಂದ 2022 ರ ಚುನಾವಣೆಯಲ್ಲಿ ಅದರ ಭವಿಷ್ಯಕ್ಕೆ ಮಾತ್ರ ಹಾನಿಯಾಗುತ್ತದೆ ಎಂದು ಶಾಸಕರು ಪ್ರತಿಪಾದಿಸಿದ್ದಾರೆ.

SCROLL FOR NEXT