ದೇಶ

ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಟ್ವಿಟ್ಟರ್ ಖಾತೆ ಹ್ಯಾಕ್

Raghavendra Adiga

ಚೆನ್ನೈ: ತಮ್ಮ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂಸುಂದರ್ ಮಂಗಳವಾರ ಹೇಳಿದ್ದಾರೆ.  

ಕಳೆದ ಕೆಲವು ದಿನಗಳಲ್ಲಿ ಖಾತೆಯಿಂದ ಯಾವುದೇ ಟ್ವೀಟ್ ಮಾಡಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ನನ್ನ ಟ್ವಿಟ್ಟರ್ ಖಾತೆ,@khushsundar ಅನ್ನು ಮೂರು ದಿನಗಳ ಹಿಂದೆ ಹ್ಯಾಕ್ ಮಾಡಲಾಗಿದೆ ಎಂದು ನಿಮಗೆ ತಿಳಿಸಲು ನಾನು ಬಯಸುತ್ತೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಟ್ವಿಟ್ಟರ್ ಆಡಳಿತ ಕಚೇರಿಗೆ ಮನವರಿಕೆ ಮಾಡಲು ಬಯಸುತ್ತೇನೆ." 

"ಕಳೆದ ಕೆಲವು ದಿನಗಳಲ್ಲಿ ಈ ಖಾತೆಯಿಂದ ಯಾವುದೇ ಟ್ವೀಟ್ ಮಾಡಲಾಗಿಲ್ಲ" ಎಂದು ಅವರು ಹೇಳಿದರು

SCROLL FOR NEXT