ಪ್ರಧಾನಿ ಮೋದಿ 
ದೇಶ

ಇಂದು ಬಕ್ರೀದ್ ಹಬ್ಬದ ಸಂಭ್ರಮ: ಮುಸ್ಲಿಂ ಬಾಂಧವರಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಶುಭಾಶಯ

ಈದ್​-ಉಲ್​-ಅಧಾವನ್ನು ಭಾರತದಾದ್ಯಂತ ಬುಧವಾರ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಭಾಶಯಗಳನ್ನು ಕೋರಿದ್ದಾರೆ. 

ನವದೆಹಲಿ: ಈದ್​-ಉಲ್​-ಅಧಾವನ್ನು ಭಾರತದಾದ್ಯಂತ ಬುಧವಾರ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಭಾಶಯಗಳನ್ನು ಕೋರಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಈದ್​-ಉಲ್​-ಅಧಾದದ ಶುಭಾಶಯಗಳು. ಸಾಮೂಹಿಕ ಅನುಭೂತಿ, ಸಾಮರಸ್ಯ ಮತ್ತು ಒಳ್ಳೆಯ ಸೇವೆಯಲ್ಲಿ ಸೇರ್ವಡಿಸುವಂತಹ ಮನೋಭಾವವನ್ನು ಹೆಚ್ಚಿಸಲಿ ಎಂದು ಹೇಳಿದ್ದಾರೆ

ರಾಷ್ಟ್ರಪತಿ ರಾಮ ನಾಥ್​ ಕೋವಿಂದ್ ಬಕ್ರೀದ್​ ಹಬ್ಬದ ವಿಶೇಷವಾಗಿ ದೇಶದ ಮುಸ್ಲಿಮರಿಗೆ ಉರ್ದು ಭಾಷೆಯಲ್ಲಿ ಟ್ವೀಟ್​ ಮಾಡುವ ಮೂಲಕ ಶುಭಾಶಯ ಕೋರಿದ್ದು, ಜನರು ಕೊವಿಡ್​ 19 ಸುರಕ್ಷತಾ ಮಾರ್ಗ ಸೂಚಿಗಳನ್ನು ಅನುಸರಿಸುವಂತೆ ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ತ್ಯಾಗ, ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬ ಸರ್ವರಿಗೂ ಮಂಗಳ ತರಲಿ. ಪರಸ್ಪರ ಸಹೋದರತೆ, ಐಕ್ಯತೆಯನ್ನು ಇನ್ನಷ್ಟು ಬಲಪಡಿಸಲಿ ಎಂದು ಶುಭ ಕೋರಿದ್ದಾರೆ.

ಮುಸ್ಲಿಮರು ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಬಕ್ರೀದ್​ ಕೂಡಾ ಒಂದು. ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಕೈಗೊಳ್ಳುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. 

4,000 ವರಷಗಳ ಹಿಂದೆ ಪ್ರವಾದಿ ಅಬ್ರಾಹಿಂ ಕನಸಿನಲ್ಲಿ ಅಲ್ಲಾಹ್ನರನ್ನು ಕಂಡರು. ತಾನು ಹೆಚ್ಚಾಗಿ ಪ್ರೀತಿಸುವವರನ್ನು ತ್ಯಾಗ ಮಾಡುವ ಸಂದರ್ಭ ಬಂದಾಗ ತಾನು ಹೆಚ್ಚಾಗಿ ಪ್ರೀತಿಸುವ ಏಕೈಕ ಪುತ್ರನನ್ನು ತ್ಯಾಗ ಮಾಡಲು ಮುಂದಾದರು. ಕೊನೆಗೆ ಇಬ್ರಾಹಿಂ ತನ್ನ ಮಗನನ್ನು ಬಲಿಕೊಡಲು ಬಲಿಪೀಠದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆ. ತನ್ನ ಮಗನ ಕುತ್ತಿಗೆಯ ಭಾಗಕ್ಕೆ ಕತ್ತರಿಸಲು ಮುಂದಾಗುತ್ತಾರೆ. 

ಈ ವೇಳೆ ಅವನಿಗೆ ಅನೇಕ ಅಡೆ-ತಡೆಗಳು ಎದುರಾಗುತ್ತವೆ. ಮಗನ ಕುತ್ತಿಗೆಗೆ ಕತ್ತಿ ತರುತ್ತಿದ್ದಂತೆ ಇಸ್ಮಾಯಿಲ್ ಮಾಯವಾಗಿ ಆತನ ಜಾಗದಲ್ಲಿ ಕುರಿಯೊಂದು ಕಾಣಿಸಿಕೊಳ್ಳುತ್ತದೆ. ಅಲ್ಲಾಹನು ಪ್ರವಾದಿ ಇಬ್ರಾಹಿಂರ ಭಕ್ತಿ, ನಂಬಿಕೆ, ವಿಶ್ವಾಸವನ್ನು ಪರೀಕ್ಷಿಸಿದ್ದು ಇದರಲ್ಲಿ ಪ್ರವಾದಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಈ ಹಬ್ಬವನ್ನು ಬಲಿದಾನ, ತ್ಯಾಗದ ಸಂಕೇತವಾಗಿ ಆಚರಿಸಲಾಗುತ್ತೆ.​ ತ್ಯಾಗದ ಕಥೆಯನ್ನು ಹಿಬ್ರೂ ಬೈಬಲ್​ನಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Watch| Traffic Fine ಗೆ ಶೇ.50 ರಷ್ಟು ರಿಯಾಯಿತಿ; ವಂಚಕರಿಂದ ಮೋಸಹೋದ ಟೆಕ್ಕಿ!; Dharmasthala Case: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ SIT ದಾಳಿ; ಮೊಬೈಲ್ ವಶಕ್ಕೆ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT