ದೇಶ

ಪೂಂಚ್‌ನಲ್ಲಿ ಗಣಿ ಸ್ಫೋಟ: ಓರ್ವ ಭಾರತೀಯ ಯೋಧ ಸಾವು

Manjula VN

ಪೂಂಚ್​: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸಂಭವಿಸಿದ ಗಣಿ ಸ್ಫೋಟದಲ್ಲಿ ಓರ್ವ ಭಾರತೀಯ ಯೋಧರೊಬ್ಬರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ಸೆಪೋಯ್​ ಕೆ ಕಮಲ್ ದೇವ್ ವೈದ್ಯ (27)ರನ್ನು ಕೃಷ್ಣ ಘಾಟಿ ಸೆಕ್ಟರ್‌ನ ಫಾರ್ವರ್ಡ್ ಪೋಸ್ಟ್‌ನಲ್ಲಿ ಎಲ್‌ಒಸಿ ಬಳಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ಸ್ಥಳದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕಮಲ್ ದೇವ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಮತ್ತಷ್ಟು ಯೋಧರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ, ಮಾರ್ಗದ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ.

ಕಮಲ್ ದೇವ್ ವೈದ್ಯ ಅವರು ಹಿಮಾಚಲ ಪ್ರದೇಶದ ಹಮೀರ್ಪುರ್ ಜಿಲ್ಲೆಯ ಘುಮಾರ್ವಿನ್ ಗ್ರಾಮದ ನಿವಾಸಿಯಾಗಿದ್ದರು. ಕಮಲ್ ಅವರು, ತಾಯಿ ವನಿತಾ ದೇವಿ ಅವರನ್ನು ಅಗಲಿದ್ದಾರೆಂದು ತಿಳಿಸಿದ್ದಾರೆ. 

ಕಮಲ್ ದೇವ್ ವೈದ್ಯ ಅವರು ಅತ್ಯಂತ ವೀರ, ಪ್ರೇರಿತ ಹಾಗೂ ಪ್ರಾಮಾಣಿಕ ಸೈನಿಕರಾಗಿದ್ದರು. ಅವರ ತ್ಯಾಗ ಮತ್ತು ಕರ್ತವ್ಯದ ಮೇಲಿದ್ದ ಭಕ್ತಿಗೆ ದೇಶ ಸದಾ ಋಣಿಯಾಗಿರಲಿದೆ ಎಂದು ಹೇಳಿದ್ದಾರೆ.

SCROLL FOR NEXT