ದೇಶ

ಮುಂದಿನ ವಾರ ಕಾಂಗ್ರೆಸ್ ಆಡಳಿತದ ರಾಜಸ್ಥಾನ ಸಂಪುಟ ವಿಸ್ತರಣೆ ಸಾಧ್ಯತೆ- ಪಕ್ಷದ ಮೂಲಗಳು

Nagaraja AB

ಜೈಪುರ: ಮುಂದಿನ ವಾರ ಕಾಂಗ್ರೆಸ್ ಆಡಳಿತದ ರಾಜಸ್ಥಾನ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿರುವುದಾಗಿ ಪಕ್ಷದ ಮೂಲಗಳು ಶನಿವಾರ ತಿಳಿಸಿವೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತು ರಾಜಸ್ಥಾನ ಐಎಸಿಸಿ ಉಸ್ತುವಾರಿ ಶನಿವಾರ ರಾತ್ರಿ ಜೈಪುರಕ್ಕೆ ಆಗಮಿಸಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.ಸಂಪುಟ ಪುನರ್ ರಚನೆ ಮತ್ತು ಇತರ ರಾಜಕೀಯ ನೇಮಕಾತಿ ಈ ಸಭೆಯ ಅಜೆಂಡಾ ಆಗಿತ್ತು ಎಂದು ಮೂಲಗಳು ಹೇಳಿವೆ.

ಉಭಯ ನಾಯಕರು ರಸ್ತೆ ಮೂಲಕ ಜೈಪುರಕ್ಕೆ ಆಗಮಿಸಿದ್ದಾರೆ. ವೇಣುಗೋಪಾಲ್ ರಾಜಸ್ಥಾನದಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಪಂಜಾಬ್ ನಂತರ ರಾಜಸ್ಥಾನದತ್ತ ಕಾಂಗ್ರೆಸ್ ಹೈಕಮಾಂಡ್ ಗಮನ ಹರಿಸಿದೆ. ಅಲ್ಲಿ ಸಚಿನ್ ಪೈಲಟ್ ಗುಂಪಿನಿಂದ ಸಂಪುಟ ವಿಸ್ತರಣೆ ಹಾಗೂ ರಾಜಕೀಯ ನೇಮಕಾತಿಗಾಗಿ ತೀವ್ರವಾದ ಬೇಡಿಕೆಯಿದೆ. ಕಳೆದ ವರ್ಷ ಗೆಹ್ಲೋಟ್ ನಾಯಕತ್ವ ವಿರುದ್ಧ ಸಚಿನ್ ಪೈಲಟ್ ನೇತೃತ್ವದಲ್ಲಿ 18 ಶಾಸಕರು ಬಂಡಾಯವೆದಿದ್ದರು.

ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿನ್ ಪೈಲಟ್ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು.ಪ್ರಸ್ತುತ,ಅಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಚಿವರ ಪರಿಷತ್ತಿನಲ್ಲಿ 21 ಸದಸ್ಯರಿದ್ದು, 9 ಸ್ಥಾನಗಳು ಖಾಲಿ ಇವೆ. ರಾಜಸ್ಥಾನ ಸರ್ಕಾರ ಗರಿಷ್ಠ 30 ಮಂತ್ರಿಗಳನ್ನು ಹೊಂದುವ ಅವಕಾಶವಿದೆ.

SCROLL FOR NEXT