ದೇಶ

ಕೇರಳದಲ್ಲಿ ಜೀಕಾ ವೈರಸ್‍ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿಕೆ

Nagaraja AB

ತಿರುವನಂತಪುರಂ: ಕೇರಳದಲ್ಲಿ ಇಂದು ಇನ್ನೂ ಇಬ್ಬರಿಗೆ ಜೀಕಾ ವೈರಸ್ ಧೃಢಪಡುವುದರೊಂದಿಗೆ ರಾಜ್ಯದಲ್ಲಿ ಈ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 48ಕ್ಕೆ ಏರಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ತಿಳಿಸಿದ್ದಾರೆ. 

ಇಂದು ತಿರುವನಂತಪುರಂ ಜಿಲ್ಲೆಯಲ್ಲಿ 37 ವರ್ಷದ ವ್ಯಕ್ತಿಗೆ ಮತ್ತು ಕಳಕೊಟ್ಟಂ ನಲ್ಲಿ 27 ವರ್ಷದ ಮಹಿಳೆಗೆ ವೈರಸ್ ದೃಢಪಟ್ಟಿದೆ. ಒಟ್ಟು 48 ಪ್ರಕರಣಗಳ ಪೈಕಿ 44 ಮಂದಿಗೆ ಪರೀಕ್ಷೆಯಲ್ಲಿ ನೆಗೆಟೀವ್  ವರದಿ ಬಂದಿದೆ. ಉಳಿದಂತೆ ನಾಲ್ವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. 

ಈ ಮೊದಲು, ಮೊದಲ ಬಾರಿಗೆ ಕೇರಳದಲ್ಲಿ 24 ವರ್ಷದ ಗರ್ಭಿಣಿಗೆ ಜೀಕಾ ವೈರಸ್ ದೃಢಪಟ್ಟಿತ್ತು. ಆರು ದಿನಗಳ ನಂತರ ಆಕೆ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಕೇರಳದಲ್ಲಿ ಈಗಾಗಲೇ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆ ಜೀಕಾ ವೈರಸ್ ಕಳವಳಕ್ಕೆ ಕಾರಣವಾಗಿದೆ. 

SCROLL FOR NEXT