ದೇಶ

ರಾಮಪ್ಪ ಮಂದಿರಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಸ್ಥಾನಮಾನ: ದೇವಾಲಯದ ಭದ್ರತೆ ಹೆಚ್ಚಿಸಿದ ಪುರಾತತ್ವ ಇಲಾಖೆ!

Manjula VN

ಮುಲುಗು: ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿರುವ ತೆಲಂಗಾಣದ ವಾರಂಗಲ್‌ ಜಿಲ್ಲೆಯ ಪಾಲಂಪೇಟ್ ಗ್ರಾಮದಲ್ಲಿರುವ ರಾಮಪ್ಪ ದೇವಾಲಯಕ್ಕೆ ಭಾರತೀಯ ಪುರಾತತ್ವ ಇಲಾಖೆಯು ಭದ್ರತೆಯನ್ನು ಹೆಚ್ಚಿಸಿದೆ. 

ಈ ಹಿಂದೆ ಭಾರತೀಯ ಪುರಾತತ್ವ ಇಲಾಖೆಯು ದೇವಾಲಯಕ್ಕೆ ಪೊಲೀಸ್ ಭದ್ರತೆ ಒದಗಿಸುವಂತೆ ತೆಲಂಗಾಣ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸೂಚಿಸಿತ್ತು. ಆದರೆ, ಸರ್ಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗದ ಹಿನ್ನೆಲೆಯಲ್ಲಿ, ಇಲಾಖೆಯೇ ದೇವಾಲಯಕ್ಕೆ 24*7 ಭದ್ರತೆಯೊದಗಿಸಲು ನಿರ್ಧರಿಸಿದೆ. 

ಪುರಾತತ್ವ ಇಲಾಖೆಯ ಅಧಿಕಾರಿಗಳು ಮಾತನಾಡಿ, ಈಗಾಗಲೇ ದೇವಾಲಯಕ್ಕೆ ತರಬೇತಿ ಪಡೆದ 6 ಮಂದಿ ಭದ್ರತಾ ಪಡೆಗಳನ್ನು ನಿಯೋಜನೆಗೊಳಿಸಲಾಗಿದೆ. ಈ ಹಿಂದೆಯೇ ದೇವಾಲಯಕ್ಕೆ ಭದ್ರತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಎಎಸ್ಐ ತಮ್ಮ ವೇತನ ಮಸೂದೆಗಳನ್ನು ತೆಗೆದುಕೊಳ್ಳಬೇಕೆಂಬ ನಿಯಮದೊಂದಿಗೆ ರಾಜ್ಯ ಸರ್ಕಾರ ದೇವಾಲಯಕ್ಕೆ ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿತ್ತು. ಹೀಗಾಗಿ, ಇಲಾಖೆಯೇ ಭದ್ರತಾ ಪಡೆಗಳನ್ನು ನಿಯೋಜನೆಗೊಳಿಸಿದೆ ಎಂದು ಹೇಳಿದ್ದಾರೆ. 

SCROLL FOR NEXT