ರಾಜ್ ಕುಂದ್ರ 
ದೇಶ

ಪೋರ್ನೋಗ್ರಫಿ ಪ್ರಕರಣ: ಹೊಸ ಎಫ್ಐಆರ್ ನಲ್ಲಿ ಕುಂದ್ರ ಕಂಪನಿಯ ನಿರ್ಮಾಪಕರು, ನಟಿ ಗೆಹಾನ ವಸಿಷ್ಠ ಹೆಸರು 

ರಾಜ್ ಕುಂದ್ರ ಬಂಧನಕ್ಕೊಳಗಾಗಿರುವ ಪೋರ್ನೋಗ್ರಫಿ ಪ್ರಕರಣದಲ್ಲಿ ಮುಂಬೈ ನ ಕ್ರೈಮ್ ಬ್ರಾಂಚ್ ನ ಪೊಲೀಸರು ಹೊಸ ಎಫ್ಐಆರ್ ದಾಖಲಿಸಿದ್ದಾರೆ. 

ಮುಂಬೈ: ರಾಜ್ ಕುಂದ್ರ ಬಂಧನಕ್ಕೊಳಗಾಗಿರುವ ಪೋರ್ನೋಗ್ರಫಿ ಪ್ರಕರಣದಲ್ಲಿ ಮುಂಬೈ ನ ಕ್ರೈಮ್ ಬ್ರಾಂಚ್ ನ ಪೊಲೀಸರು ಹೊಸ ಎಫ್ಐಆರ್ ದಾಖಲಿಸಿದ್ದಾರೆ. ಹೊಸ ಎಫ್ಐಆರ್ ನಲ್ಲಿ ರಾಜ್ ಕುಂದ್ರ ಕಂಪನಿಯ ನಿರ್ಮಾಪಕರು, ನಟಿ ಗೆಹಾನ ವಸಿಷ್ಠ ಹೆಸರಿದೆ. 

ಹಾಟ್ ಶಾಟ್ಸ್ ಆಪ್ ಗೆ ಪೋರ್ನಾಗ್ರಫಿ ಸಿನಿಮಾವನ್ನು ಚಿತ್ರೀಕರಿಸಲು ತಮ್ಮನ್ನು ಒತ್ತಾಯಿಸಿದ್ದರು ಎಂದು ನಟಿಯೊಬ್ಬರು ಮಲ್ವಾನಿ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ ಆಧಾರದಲ್ಲಿ ಕ್ರೈಮ್ ಬ್ರಾಂಚ್ ನ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. 

ಐಪಿಸಿಯ 420 (ಮೋಸ) 392 (ದರೋಡೆಗೆ ಶಿಕ್ಷೆ) 393 (ದರೋಡೆ ಯತ್ನ) ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತನೆ ತಡೆಗೆ ರೂಪಿಸಲಾಗಿರುವ ಕಾಯ್ದೆ ಹಾಗೂ ಐಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದರು. 

ಈ ಪ್ರಕರಣದಲ್ಲಿ ಜುಲೈ 19 ರಂದು ರಾಜ್ ಕುಂದ್ರ ಬಂಧನವಾಗಿತ್ತು.  ಜು.27 ರಂದು ರಾಜ್ ಕುಂದ್ರ ಅವರಿನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. 

ಪೋರ್ನ್ ಸಿನಿಮಾಗಳ ಚಿತ್ರೀಕರಣ ಹಾಗೂ ಆನ್ ಲೈನ್ ನಲ್ಲಿ ವಿತರಣೆ ಮಾಡುವ ಮೂಲಕ ರಾಜ್ ಕುಂದ್ರ ಕಳೆದ ಆಗಸ್ಟ್ ನಿಂದ ಡಿಸೆಂಬರ್ ವರೆಗೂ 1.17 ಕೋಟಿ ರೂಪಾಯಿ ಗಳಿಸಿದ್ದರು ಎಂದು ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಮಾಹಿತಿ ನೀದಿದ್ದಾರೆ. 

ಆದರೆ ತಮ್ಮ ವಿರುದ್ಧ ಪೊಲೀಸರು ಆರೋಪಿಸಿರುವಂತೆ ತಾವು ಮಾಡಿದ್ದ ಸಿನಿಮಾಗಳು ಪೋರ್ನ್ ಸಿನಿಮಾಗಳಲ್ಲ ಅವುಗಳಲ್ಲಿ ನೇರ ಅಥವಾ ಸ್ಪಷ್ಟ ಲೈಂಗಿಕ ಕ್ರಿಯೆಗಳು ಇಲ್ಲ ಎಂದು ರಾಜ್ ಕುಂದ್ರ ಹೇಳಿದ್ದಾರೆ. ಕುಂದ್ರ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿದ್ದ, ಕುಂದ್ರ ಆಪ್ ನಿರ್ಮಿತ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ನಟಿ ವಸಿಷ್ಠ  ಕಾಮಪ್ರಚೋದಕ ವಿಡಿಯೋಗಳು ಪೋರ್ನ್ ವಿಡಿಯೋಗಳಲ್ಲ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Parliament Monsoon Session: ರಾಹುಲ್ ವಿರುದ್ಧ ಆಕ್ರೋಶ; ಸಂಸತ್ ಆವರಣದಲ್ಲಿ NDA ಸಂಸದರ ಬೃಹತ್ ಪ್ರತಿಭಟನಾ ಮೆರವಣಿಗೆ, ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ..!

ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 111ಕ್ಕೆ ಏರಿಕೆ, ಹಲವರಿಗೆ ಗಾಯ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಬಾರ್ ಕ್ಯಾಷಿಯರ್‌ಗೆ ಬೆದರಿಕೆ; ಇಬ್ಬರು ಉದ್ಯಮಿಗಳು, ಪ್ರಭಾವಿ ಮಹಿಳೆ ಮೇಲೆ ಕಣ್ಣಿಟ್ಟ ಪೊಲೀಸರು!

ಬಿಲಿಯನೇರ್ Gautam Adaniಗೆ ಬಿಗ್ ರಿಲೀಫ್: ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಜಾಗೊಳಿಸಿದ ಅಮೆರಿಕಾ ನ್ಯಾಯಾಲಯ..!

ಬಿಡದಿ ಹೋರಾಟ ಅರ್ಧಕ್ಕೆ ಸ್ಥಗಿತ; ‘ರೈತರ ನ್ಯಾಯಕ್ಕಾಗಿ ತಾರ್ಕಿಕ ಅಂತ್ಯದವರೆಗೆ ಹೋರಾಟ’ ಎಂದ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ..!