ದೇಶ

60 ವರ್ಷಕ್ಕೂ ಮೇಲ್ಪಟ್ಟವರಲ್ಲಿ 16 ವಾರ ನಂತರ ಸಿಂಗಲ್ ಡೋಸ್ ಕೋವಿಶೀಲ್ಡ್ ಪರಿಣಾಮಕಾರಿತ್ವ ಕ್ಷೀಣ-ಲಂಕಾ ಸಂಶೋಧಕರು

Nagaraja AB

ಕೊಲಂಬೊ: 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 16 ವಾರಗಳ ನಂತರ ಸಿಂಗಲ್ ಡೋಸ್ ಕೋವಿಶೀಲ್ಡ್ ಪರಿಣಾಮಕಾರಿತ್ವ ಕ್ಷೀಣಸಿದರೆ, ಇದೇ ಅವಧಿಯಲ್ಲಿ ಶೇ.93 ರಷ್ಟು ಯುವ ಜನಾಂಗದಲ್ಲಿ ಅತ್ಯುತ್ತಮ ರೀತಿಯ ಪ್ರತಿಕ್ರಿಯೆ ವಿಶ್ವವಿದ್ಯಾನಿಲಯವೊಂದರ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. ಆಕ್ಸಫರ್ಡ್ ವಿಶ್ವವಿದ್ಯಾನಿಲಯ ಮತ್ತು ಅಸ್ಟ್ರಜೆನೆಕಾ ಔಷಧೀಯ ಕಂಪನಿ ಈ ಲಸಿಕೆಯನ್ನು ತಯಾರಿಸಿದೆ.

ವಿಶ್ವದ ಅತಿ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆಯಾಗಿರುವ  ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ, ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಅಸ್ಟಜೆನೆಕಾ ಸಹಭಾಗಿತ್ವದಲ್ಲಿ ಕೋವಿಶೀಲ್ಡ್ ತಯಾರಿಸಿದೆ. ವಯೋವೃದ್ಧರಲ್ಲಿ 16 ವಾರಗಳ ನಂತರ ಸಿಂಗಲ್ ಡೋಸ್ ಕೋವಿಶೀಲ್ಡ್ ಪರಿಣಾಮಕಾರಿತ್ವ ರೋಗನಿರೋಧಕ ಶಕ್ತಿಯನ್ನು ಕ್ಷೀಣಿಸುತ್ತದೆ ಆದರೆ,  ಮೆಮೊರಿ ಪ್ರತಿಕ್ರಿಯೆಗಳು ಹಾಗೇ ಇರುತ್ತವೆ.

ಆದಾಗ್ಯೂ, ಒಂದು ಡೋಸ್ ನಂತರವೂ, 60 ಕ್ಕಿಂತ ಕಡಿಮೆ ವಯಸ್ಸಿನವರು ಉತ್ತಮ ಪ್ರತಿಕ್ರಿಯೆಗಳನ್ನು ಹೊಂದಿದ್ದರು ಶೇಕಡಾ 93 ರಷ್ಟು ಜನರು 16 ವಾರಗಳಲ್ಲಿ ಪ್ರತಿಕಾಯಗಳನ್ನು ಹೊಂದಿದ್ದರು ಎಂದು ಶ್ರೀ ಜಯವರ್ಧನೆಪುರ ವಿಶ್ವವಿದ್ಯಾಲಯದ ರೋಗನಿರೋಧಕ ಮತ್ತು ಆನ್ವಯಿಕ ವಿಜ್ಞಾನ ವಿಭಾಗದ ಪ್ರೊಫೆಸರ್ ನೀಲಿಕಾ ಮಲಾವಿಜ್ ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಸಿಂಗಲ್ ಡೋಸ್ ಕೋವಿಶೀಲ್ಡ್ ಲಸಿಕೆಯ ಪ್ರತಿಕ್ರಿಯೆಗಳ ಕುರಿತ ನ ನಮ್ಮ ಪ್ರಬಂಧವನ್ನು ನ್ಯಾಚುರ್ ಕಾಮ್ಸ್ "ನಲ್ಲಿ ಪ್ರಕಟಿಸಲಾಗಿದೆ. ಸಿಂಗಲ್ ಡೋಸ್ ಕೋವಿಶೀಲ್ಡ್ ಲಸಿಕೆಯಿಂದ ಶೇ.93.4 ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ, ಶೇ.97.1 ರಷ್ಟು ಮಂದಿಯಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸಿದೆ. ಈ ಅಧ್ಯಯನಕ್ಕೆ @UKinSriLanka, @WHOSriLanka ಚೀನೀ ಅಕಾಡೆಮಿ ಆಫ್ ಸೈನ್ಸ್ ನೀಡಿದೆ ಧನಸಹಾಯ  ಮಾಡಿರುವುದಾಗಿ ಎಂದು ಅವರು ಹೇಳಿದ್ದಾರೆ.

ಇನ್ನೂ 500,000 ಜನರಿಗೆ ಕೋವಿಶೀಲ್ಡ್ ಎರಡನೇ ಡೋಸ್ ನೀಡಲು ಶ್ರೀಲಂಕಾ ಕಾಯುತ್ತಿದೆ. ಜನವರಿ ಕೊನೆಯಲ್ಲಿ ಶ್ರೀಲಂಕಾದಲ್ಲಿ ಲಸಿಕಾ ಅಭಿಯಾನ ಆರಂಭವಾಗಿತ್ತು.

SCROLL FOR NEXT