ದೇಶ

ಕೋವಿಡ್-19: ಗುಜರಾತ್ ನ ಧಾರ್ಮಿಕ ಮೆರವಣಿಗೆಯಲ್ಲಿ 150 ಮಂದಿ ಭಾಗಿ; ಬಂಧಿತರ ಪೈಕಿ ಡಿಜೆ ಆಪರೇಟರ್

Srinivas Rao BV

ಸುರೇಂದ್ರ ನಗರ್: ಗುಜರಾತ್ ನಲ್ಲಿ ಕೋವಿಡ್-19 ನಿಯಮ ಉಲ್ಲಂಘನೆಯಾಗಿದ್ದು, ಧಾರ್ಮಿಕ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. 

ಸುರೇಂದ್ರ ನಗರ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಮೆರವಣಿಗೆಯಲ್ಲಿ 150 ಮಂದಿ ಭಾಗಿಯಾಗಿದ್ದು, ಕೊರೋನ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರು ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಓರ್ವ ಡಿಸ್ಕ್ ಜಾಕಿ (ಡಿಜೆ) ಆಪರೇಟರ್ ರ ವಿರುದ್ಧ ಕೇಸ್ ದಾಖಲಿಸಿದ್ದಾರೆ. 

ಶುಕ್ರವಾರದಂದು ಮಧ್ಯಾಹ್ನ ಈ ಮೆರವಣಿಗೆ ನಡೆಸಲಾಗಿದೆ. ಧಾರ್ಮಿಕ ಮೆರವಣಿಗೆಯ ನಂತರ ಜನರು ಡಿಜೆ ಹಾಡಿಗೆ ನೃತ್ಯವನ್ನೂ ಮಾಡಿದ್ದರು. ಸಾಮಾಜಿಕ ಅಂತರ ಮರೆತು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ ಹಾಗೂ ಗುಜರಾತ್ ಪೊಲೀಸ್ ಕಾಯ್ದೆಯ ಅಡಿಯಲ್ಲಿ ಸುರೇಂದ್ರನಗರ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ನೊಟಿಫಿಕೇಷನ್ ಜಾರಿಗೊಳಿಸಿದ್ದಾರೆ. ಕಾರ್ಯಕ್ರಮಕ್ಕೆ ಬಳಕೆ ಮಾಡಲಾದ ಮ್ಯೂಸಿಕ್ ಸಿಸ್ಟಂ ನ್ನು ವಶಕ್ಕೆ ಪಡೆದಿದ್ದಾರೆ.

SCROLL FOR NEXT