ಅಂತಾರಾಜ್ಯ ಘರ್ಷಣೆಯ ಬಳಿಕ ಅಸ್ಸಾಂ ಭದ್ರತಾ ಪಡೆಗಳಿಂದ ಬಿಗಿ ಬಂದೋಬಸ್ತ್ 
ದೇಶ

ವಿವಾದಿತ ಗಡಿ ಪ್ರದೇಶದಗಳಿಂದ ಪೊಲೀಸ್ ಸಿಬ್ಬಂದಿ ಹಿಂಪಡೆಯಲು ಅಸ್ಸಾಮ್, ನಾಗಾಲ್ಯಾಂಡ್ ನಿರ್ಧಾರ

ವಿವಾದಿತ ಗಡಿ ಪ್ರದೇಶಗಳಿಂದ ಭದ್ರತಾ ಪಡೆಗಳನ್ನು ಹಿಂಪಡೆಯುವುದಕ್ಕೆ ಅಸ್ಸಾಂ, ನಾಗಾಲ್ಯಾಂಡ್ ನಿರ್ಧರಿಸಿದೆ.

ಗುವಾಹಟಿ: ವಿವಾದಿತ ಗಡಿ ಪ್ರದೇಶಗಳಿಂದ ಭದ್ರತಾ ಪಡೆಗಳನ್ನು ಹಿಂಪಡೆಯುವುದಕ್ಕೆ ಅಸ್ಸಾಂ, ನಾಗಾಲ್ಯಾಂಡ್ ನಿರ್ಧರಿಸಿದೆ.

ಪ್ರಕ್ಷುಬ್ಧ ವಾತಾವರಣವನ್ನು ತಗ್ಗಿಸುವ ನಿಟ್ಟಿನಲ್ಲಿ ಉಭಯ ರಾಜ್ಯಗಳೂ ಈ ನಿರ್ಧಾರಕ್ಕೆ ಬಂದಿವೆ. ಅಂತಾರಾಜ್ಯ ಗಡಿ ವಿವಾದ ಉಂಟಾಗಿದ್ದು, ವಿವಾದಿತ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. 

ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಈ ನಡೆಯನ್ನು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ್ದಾರೆ. ಉಭಯ ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ನಡುವೆ ನಾಗಲ್ಯಾಂಡ್ ನ ದಿಮಾಪುರದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ವಿವಾದಿತ ಪ್ರದೇಶದಲ್ಲಿ ಪೊಲೀಸರ ನಡುವೆ ಘರ್ಷಣೆ ಉಂಟಾಗಿತ್ತು.

ವಿವಾದಿತ ಎರಡೂ ಪ್ರದೇಶಗಳು ಜೋರ್ಹಟ್ ಜಿಲ್ಲೆಯಲ್ಲಿನ ಡೆಸೊಯ್ ಕಣಿವೆ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದವೆಂದು ಅಸ್ಸಾಂ ಹೇಳುತ್ತಿದೆ. ಆದರೆ ನಾಗಾಲ್ಯಾಂಡ್ ಈ ಎರಡೂ ಪ್ರದೇಶಗಳು ನಾಗಾಲ್ಯಾಂಡ್  ನ ಮೊಕೊಕ್ಚುಂಗ್ ಜಿಲ್ಲೆಯ ತ್ಸುರಾಂಗ್‌ಕಾಂಗ್ ಕಣಿವೆಯ ಭಾಗವೆಂದು ಪ್ರತಿಪಾದಿಸುತ್ತಿದೆ.

ಘರ್ಷಣೆ ತಪ್ಪಿಸಲು, ಶಾಂತಿ ಕಾಪಾಡಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿರ್ಧಾರವನ್ನು ಮುಖ್ಯಕಾರ್ಯದರ್ಶಿಗಳ ನಡುವಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿಗಳನ್ನು ವಿವಾದಿತ ಪ್ರದೇಶದಿಂದ ತಕ್ಷಣವೇ ಉಭಯ ಪಕ್ಷಗಳೂ ವಾಪಸ್ ಕರೆಸಿಕೊಳ್ಳುವುದಕ್ಕೆ ನಿರ್ಧರಿಸಿದ್ದು, 24 ಗಂಟೆಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳಬೇಕೆಂಬ ನಿರ್ಧಾರ ಕೈಗೊಳ್ಳಲಾಗಿದೆ.

ಒಪ್ಪಂದದ ಪ್ರಕಾರ ನಾಗಾಲ್ಯಾಂಡ್ ಹಾಗೂ ಅಸ್ಸಾಂ ಈ ಪ್ರದೇಶದ ಮೇಲೆ ಯುಎವಿ ಮೂಲಕ ಕಣ್ಗಾವಲು ಇರಲಿದೆ. ಶಾಂತಿ ಸ್ಥಾಪನೆಗೆ ಸಹರಿಸಿದ ನಾಗಾಲ್ಯಾಂಡ್ ನ ಸಿಎಂ ಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಧನ್ಯವಾದ ತಿಳಿಸಿದ್ದಾರೆ.

ಅಸ್ಸಾಂ ಗಡಿಗಳಲ್ಲಿ ಶಾಂತಿ ಪಾಲನೆಗೆ ಬದ್ಧವಾಗಿದೆ ಹಾಗೂ ಈಶಾನ್ಯದ ಆರ್ಥಿಕ ಸಾಮಾಜಿಕ ಸಮೃದ್ಧಿ ಶ್ರಮಿಸುತ್ತದೆ ಎಂದು ಹಿಮಂತ ಬಿಸ್ವ ಶರ್ಮ ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ20 ಸರಣಿಗೆ ಭಾರತ ತಂಡ ಪ್ರಕಟ: ಹಾರ್ದಿಕ್, ಪಂತ್'ಗೆ ಬಿಗ್ ಶಾಕ್; ವಿರಾಟ್, ರೋಹಿತ್​ ಶರ್ಮಾಗೆ ಚಾನ್ಸ್

‘ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ್ರೂ ನಂಬದ ಅನಂತ್ ನಾಗ್; ‘ಸುಳ್ಳು ಸುದ್ದಿ’ ಎಂದು ನಕ್ಕಿ ಮಲಗಿದ್ರು’

CBFC ಪುನಾರಚನೆ: ಸುನಿಲ್ ಶೆಟ್ಟಿ, ಪ್ರೀತಿ ಜಿಂಟಾ, ರಿಕಿ ಕೇಜ್ ಸೇರಿದಂತೆ 18 ಸದಸ್ಯರ ಆಯ್ಕೆ!

ಬಿಸಿಸಿಐನಿಂದ WPL 2027ರ ವೇಳಾಪಟ್ಟಿ ಪ್ರಕಟ: ಇದೇ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ