ಒಣ ಸ್ವ್ಯಾಬ್ ಟೆಸ್ಟ್ 
ದೇಶ

ಸಿಸಿಎಂಬಿಯ ಒಣ ಸ್ವ್ಯಾಬ್ ಟೆಸ್ಟ್ ಅಗ್ಗದ್ದು, ಫಲಿತಾಂಶ ಆರ್​ಟಿಸಿಪಿಆರ್ ನಂತೆ ನಿಖರ: ವಿಜ್ಞಾನಿಗಳು

ಸಿಸಿಎಂಬಿ ಒಣ ಸ್ವ್ಯಾಬ್ ಟೆಸ್ಟ್ ಅಗ್ಗವಾಗಿದ್ದು ಇದರಿಂದ ಪರೀಕ್ಷಾ ವೆಚ್ಚವನ್ನು ನಾಲ್ಕು ಪಟ್ಟು ಕಡಿತಗೊಳಿಸಬಹುದು. ಅಲ್ಲದೆ ಪರೀಕ್ಷೆಯನ್ನು 3 ಪಟ್ಟು ಹೆಚ್ಚಿಸಬಲ್ಲ ಡ್ರೈ ಸ್ವ್ಯಾಬ್ ಆರ್ಟಿ-ಪಿಸಿಆರ್ ಪರೀಕ್ಷೆಯು ಪ್ರಮಾಣಿತ ಪರೀಕ್ಷಾ ವಿಧಾನಕ್ಕಿಂತ ವ್ಯತ್ಯಾಸವನ್ನು ತೋರಿಸುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನವದೆಹಲಿ: ಸಿಸಿಎಂಬಿ ಒಣ ಸ್ವ್ಯಾಬ್ ಟೆಸ್ಟ್ ಅಗ್ಗವಾಗಿದ್ದು ಇದರಿಂದ ಪರೀಕ್ಷಾ ವೆಚ್ಚವನ್ನು ನಾಲ್ಕು ಪಟ್ಟು ಕಡಿತಗೊಳಿಸಬಹುದು. ಅಲ್ಲದೆ ಪರೀಕ್ಷೆಯನ್ನು 3 ಪಟ್ಟು ಹೆಚ್ಚಿಸಬಲ್ಲ ಡ್ರೈ ಸ್ವ್ಯಾಬ್ ಆರ್ಟಿ-ಪಿಸಿಆರ್ ಪರೀಕ್ಷೆಯು ಪ್ರಮಾಣಿತ ಪರೀಕ್ಷಾ ವಿಧಾನಕ್ಕಿಂತ ವ್ಯತ್ಯಾಸವನ್ನು ತೋರಿಸುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸಿಎಸ್ಐಆರ್-ಸಿಸಿಎಂಬಿ ತಂಡವು ಒಣ ಸ್ವ್ಯಾಬ್‌ಗಳಲ್ಲಿ ಕೊರೋನಾವೈರಸ್ ಮಾದರಿಗಳ ಸ್ಥಿರತೆಯನ್ನು ಪರೀಕ್ಷಿಸಿದೆ. ಒಣ ಸ್ವ್ಯಾಬ್‌ಗಳನ್ನು ಸುಮಾರು 25 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬಹುದು. ಅಲ್ಲದೆ 24 ಗಂಟೆಗಳವರೆಗೆ ಸಾಗಿಸಬಹುದು. ಇದಕ್ಕೆ ಶೀತ ಸರಪಳಿಯ ಅಗತ್ಯವಿಲ್ಲ. ಹೀಗಾಗಿ ವೆಚ್ಚವನ್ನು ಕಡಿತಗೊಳಿಸುತ್ತದೆ ಎಂದು ತೋರಿಸುತ್ತದೆ.

ಮಾದರಿಗಳು 4 ಡಿಗ್ರಿ ಸೆಲ್ಸಿಯಸ್‌ನಲ್ಲಿ 3 ದಿನಗಳವರೆಗೆ ಸ್ಥಿರವಾಗಿರುತ್ತವೆ. ಅಲ್ಲದೆ ಪರೀಕ್ಷಾ ಫಲಿತಾಂಶಗಳನ್ನು ಪ್ರಸ್ತುತ ಬಳಸುವ ದ್ರವ ವೈರಲ್ ಟ್ರಾನ್ಸ್‌ಪೋರ್ಟ್ ಮೀಡಿಯಂ(ವಿಟಿಎಂ ಆರ್‌ಎನ್‌ಎ)ಗೆ ಹೋಲಿಸಬಹುದು. ಎರಡು ವಿಭಿನ್ನ ತಾಪಮಾನಗಳಲ್ಲಿ SARS-199 CoV-2 ನ ಎರಡು ತಳಿಗಳ ತಾತ್ಕಾಲಿಕ ಸ್ಥಿರತೆಯ ಕುರಿತು ಅಧ್ಯಯನವು ಸೂಚಿಸುತ್ತದೆ. 

ಅನೇಕ ಒಳಚರಂಡಿ ಕಣ್ಗಾವಲು ಮತ್ತು ಅನುಕ್ರಮ ಅಧ್ಯಯನಗಳಿಂದ ಸೂಚಿಸಲ್ಪಟ್ಟಂತೆ ಸಾರ್ಕ್-ಕೋವಿ-2 ನ ಇತರ ಉದಯೋನ್ಮುಖ ರೂಪಾಂತರಗಳ ಸಂದರ್ಭದಲ್ಲಿ ಒಣ ಸ್ವ್ಯಾಬ್ ವಿಧಾನವು ಇದೇ ರೀತಿಯ ಪ್ರಯೋಜನಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕೋವಿಡ್ ಗೆ ಕಾರಣವಾದ ವೈರಸ್ SARS-CoV-2ನ ವಿವಿಧ ತಳಿಗಳ ಶೀಘ್ರ ಹರಡುವಿಕೆ ಮತ್ತು ವಿಕಸನವು ಜಾಗತಿಕವಾಗಿ ರೋಗ ನಿಯಂತ್ರಣ ಕ್ರಮಗಳನ್ನು ಪ್ರಶ್ನಿಸುತ್ತಿದೆ. ಈ ಸನ್ನಿವೇಶದಲ್ಲಿ, ಗರಿಷ್ಠ ಜನಸಂಖ್ಯೆಯನ್ನು ಕಡಿಮೆ ಸಮಯದಲ್ಲಿ ಪರೀಕ್ಷಿಸುವುದು ಮತ್ತು ಅಸ್ತಿತ್ವದಲ್ಲಿರುವ ರೋಗನಿರ್ಣಯದ ಸೌಕರ್ಯಗಳೊಂದಿಗೆ ಕನಿಷ್ಠ ವೆಚ್ಚವನ್ನು ಪರೀಕ್ಷಿಸುವುದು ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸುವ ಏಕೈಕ ಮಾರ್ಗವಾಗಿದೆ ಎಂದು ಸಿಸಿಎಂಬಿ ತಂಡವು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!