ಗೊಂಡ(ಉತ್ತರ ಪ್ರದೇಶ): ಸಿಲಿಂಡರ್ ಸ್ಫೋಟವಾಗಿ ಅಕ್ಕಪಕ್ಕದ ಮನೆಗಳು ಕುಸಿದು ಬಿದ್ದು 7 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗೊಂಡ ನಗರದ ವಾಸಿರ್ ಗಂಜ್ ಪ್ರದೇಶದ ಟಿಕ್ರಿ ಗ್ರಾಮದಲ್ಲಿ ನಡೆದಿದೆ.
ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ 14 ಮಂದಿಯನ್ನು ಕಾಪಾಡಲಾಗಿದೆ. 7 ಮಂದಿ ಮೃತಪಟ್ಟಿದ್ದು, ಇನ್ನು 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ಸಂತೋಷ್ ಕುಮಾರ್ ಮಿಶ್ರ ತಿಳಿಸಿದ್ದಾರೆ.