ಸೇನಾ ಮುಖ್ಯಸ್ಥ ಎಂಎಂ ನರಾವಣೆ 
ದೇಶ

ಭಾರತ-ಪಾಕ್‌ ನಡುವಣ ಸಂಬಂಧ ಕ್ಷಣಾರ್ಧದಲ್ಲಿ ಬದಲಾಗದು: ಸೇನಾ ಮುಖ್ಯಸ್ಥ ಎಂಎಂ ನರಾವಣೆ

ಭಾರತ ಹಾಗೂ ಪಾಕಿಸ್ತಾನ ನಡುವೆ ಪರಿಸ್ಥಿತಿ ರಾತ್ರೋರಾತ್ರಿ ಬದಲಾಗುವುದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರಾವಣೆ. ಗುರುವಾರ ಹೇಳಿದ್ದಾರೆ. 

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವೆ ಪರಿಸ್ಥಿತಿ ರಾತ್ರೋರಾತ್ರಿ ಬದಲಾಗುವುದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರಾವಣೆ. ಗುರುವಾರ ಹೇಳಿದ್ದಾರೆ. 

ಉಭಯ ದೇಶಗಳ ನಡುವಣ ಅಪನಂಬಿಕೆ, ಅನುಮಾನ ದಶಕಗಳಿಂದ ಮುಂದುವರಿದಿದ್ದು, ಎರಡು ದೇಶಗಳ ನಡುವೆ ವಿಶ್ವಾಸ ವೃದ್ದಿಸಬೇಕಾದರೆ ಪಾಕಿಸ್ತಾನ ನಮ್ಮ ದೇಶಕ್ಕೆ ಭಯೋತ್ಪಾದಕರ ರವಾನಿಸುವುದನ್ನು ನಿಲ್ಲಿಸಬೇಕು. ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿರಬೇಕು. ನಂಬಿಕೆ, ವಿಶ್ವಾಸ ಮೂಡಿಸುವ  ಸಂಪೂರ್ಣ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಅವರು ತಿಳಿಸಿದರು.

ಜನರಲ್‌ ನರಾವಣೆ ಜಮ್ಮು ಹಾಗೂ ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಗುರುವಾರ ಪರಿಶೀಲಿಸಿದರು. ಭಯೋತ್ಪಾದಕ ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸ್ಥಳೀಯ ಕಮಾಂಡರ್‌ಗಳು ಸೇನಾ ಮುಖ್ಯಸ್ಥರಿಗೆ ವಿವರಿಸಿದರು. ಜನರಲ್‌ ನರಾವಣೆ ಯೋಧರೊಂದಿಗೆ  ಮಾತನಾಡಿದರು. 

ಸೇನೆಗೆ ಶ್ಲಾಘನೆ
ಕಾರ್ಯಾಚರಣೆಗೆ ಸದಾ ಸನ್ನದ್ದ ಸ್ಥಿತಿಯಲ್ಲಿರುವುದಕ್ಕೆ ಶ್ಲಾಘಿಸಿದರು. ಭಾರತದೊಂದಿಗೆ, ಪಾಕ್‌ ಉತ್ತಮ ಸಂಬಂಧ ಬಯಸುವುದಾದರೆ ಮೊದಲು ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಮೂಲಸೌಕರ್ಯಗಳನ್ನು ನಾಶಪಡಿಸಬೇಕು ಎಂದು ಜನರಲ್‌ ನರಾವಣೆ ಇತ್ತೀಚೆಗೆ ಹೇಳಿದ್ದರು. ಉಭಯ  ದೇಶಗಳ ಸೇನೆಗಳ ನಡುವಿನ ಕದನ ವಿರಾಮ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭದ್ರತೆಯ ಉತ್ತಮ ಸಂಕೇತವಾಗಿದೆ ಎಂದು ಅವರು ಹೇಳಿದರು. ಪರೋಕ್ಷ ಸಮರವನ್ನು ಪ್ರಚೋದಿಸುವ ತನ್ನ ನೀತಿಗಳನ್ನು ತ್ಯಜಿಸಬೇಕೆಂದು ಅವರು ಪಾಕಿಸ್ತಾನಕ್ಕೆ ಕರೆ ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT