ದೇಶ

ಐಟಿ ನಿಯಮ ಅನುಸರಣೆ: ಕೇಂದ್ರ ಸರ್ಕಾರದಿಂದ ಟ್ವಿಟರ್ ಗೆ 'ಕೊನೆಯ' ನೋಟಿಸ್!

Nagaraja AB

ನವದೆಹಲಿ: ಹೊಸ ಐಟಿ ನಿಯಮಗಳನ್ನು ಕೂಡಲೇ ಪಾಲಿಸುವಂತೆ ಕೊನೆಯದಾದ ಅವಕಾಶವೊಂದನ್ನು ನೀಡಿ ಕೇಂದ್ರ ಸರ್ಕಾರ ಶನಿವಾರ ಟ್ವಿಟರ್ ಗೆ ನೋಟಿಸ್ ನೀಡಿದೆ.ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾದರೆ ಐಟಿ ಕಾಯ್ದೆಯಡಿ ಕಾನೂನು ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳಲು ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ನಿಯಮಗಳನ್ನು ಅನುಸರಿಸಲು ಟ್ವಿಟರ್ ನಿರಾಕರಿಸಿದ್ದರಿಂದ ಮೈಕ್ರೋಬ್ಲಾಗಿಂಗ್ ಸೈಟ್ ನ ಬದ್ಧತೆ ಮತ್ತು ಅದರಲ್ಲಿ ದೇಶದ ಜನರಿಗೆ ಸುರಕ್ಷತೆಯ ಅಭಿಪ್ರಾಯವೊಂದನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನದ ಕೊರತೆ ಕಂಡುಬಂದಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.

ದೇಶದಲ್ಲಿ ದಶಕಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಣೆ ಮಾಡಿದ್ದರೂ,  ತನ್ನ ವೇದಿಕೆಯಲ್ಲಿ  ಭಾರತದ ಜನರಿಗೆ ತಮ್ಮ ಸಮಸ್ಯೆಗಳನ್ನು ಸಮಯೋಚಿತ ಮತ್ತು ಪಾರದರ್ಶಕ ರೀತಿಯಲ್ಲಿ ಪರಿಹರಿಸಲು ಮತ್ತು  ಭಾರತ ಮೂಲದಿಂದ ನ್ಯಾಯಯುತ ಪ್ರಕ್ರಿಯೆ, ಸ್ಪಷ್ಟವಾಗಿ ಗುರುತಿಸಲಾದ ಸಂಪನ್ಮೂಲಗಳಿಂದ ಕಾರ್ಯವಿಧಾನವನ್ನು ರಚಿಸಲು ಟ್ವಿಟರ್ ನಿರಾಕರಿಸಿದೆ. ತನ್ನ ನಂಬಿಕೆಗಳಿಗೆ ಆದ್ಯತೆ ನೀಡುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.

2021 ರ ಮೇ 26 ರಿಂದ ಜಾರಿಗೆ ಬಂದರೂ, ಟ್ವಿಟ್ಟರ್ ನಿಯಮಗಳನ್ನು ಐಟಿ ಕಾಯ್ದೆಯ ಹೊಸ ನಿಯಮಗಳನ್ನು ಪಾಲಿಸದ ಕಾರಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಐಟಿ ಸಚಿವಾಲಯ ಎಚ್ಚರಿಕೆ ನೀಡಿದ್ದು, ನಿಯಮಗಳನ್ನು ಕೂಡಲೇ ಪಾಲಿಸಲು ಟ್ವಿಟರ್ ಇಂಕ್ ಗೆ ಕೊನೆಯ ನೋಟಿಸ್ ನೀಡಲಾಗಿದೆ. ಅದನ್ನು ಅನುಸರಿಸದಿದ್ದಲ್ಲಿ  ಲಭ್ಯವಿರುವ ಕಾನೂನು ವಿನಾಯಿತಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಆದಾಗ್ಯೂ, ನೋಟಿಸ್ ನಿಯಮಗಳನ್ನು ಅನುಸರಿಸಲು ನಿರ್ದಿಷ್ಟ ಗಡುವನ್ನು ನೀಡಿಲ್ಲ.

SCROLL FOR NEXT