ದೇಶ

ಚುನಾವಣೋತ್ತರ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಅತ್ಯಂತ ಆತಂಕಕಾರಿ: ರಾಜ್ಯಪಾಲ ಧನ್ಕರ್

Srinivas Rao BV

ಕೋಲ್ಕತ್ತ: ಚುನಾವಣೋತ್ತರ ದಿನಗಳಲ್ಲಿ ಬಂಗಾಳದಲ್ಲಿ ಕೊಲೆ, ಅತ್ಯಾಚಾರಗಳ ಹಲವು ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಅತ್ಯಂತ ಆತಂಕಕಾರಿಯಾಗಿದೆ ಎಂದು ರಾಜ್ಯಪಾಲ ಜಗ್ದೀಪ್ ಧನ್ಕರ್ ಹೇಳಿದ್ದಾರೆ. 

ಜೂ.06 ರಂದು ರಾಜ್ಯ ಮುಖ್ಯಕಾರ್ಯದರ್ಶಿ ಹೆಚ್ ಕೆ ದ್ವಿವೇದಿ ಅವರೊಂದಿಗೆ ಮಾತನಾಡಿರುವ ಧನ್ಕರ್, ಚುನಾವಣೋತ್ತರ ಹಿಂಸಾಚಾರವನ್ನು ತಡೆಯುವುದಕ್ಕಾಗಿ ಆಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. 

ರಾಜ್ಯ ಪೊಲೀಸ್ ಇಲಾಖೆ ಆಡಳಿತದಲ್ಲಿರುವವರ ಮುಂದುವರೆದ ಭಾಗವಾಗಿರುವಂತೆ ವರ್ತಿಸುತ್ತಿದ್ದು, ರಾಜಕೀಯ ವಿರೋಧಿಗಳ ಮೇಲಿನ ದಾಳಿಗೆ ಅವಕಾಶ ನೀಡುತ್ತಿದೆ ಎಂಬ ಅರ್ಥದಲ್ಲಿ ಧನ್ಕರ್ ಹೇಳಿದ್ದು, "ಬಂಗಾಳದಲ್ಲಿ ಲಕ್ಷಾಂತರ ಮಂದಿ ಸ್ಥಳಾಂತರಗೊಳ್ಳುತ್ತಿದ್ದಾರೆ, ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ಹಾನಿಗೀಡಾಗಿದೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ. ಭದ್ರತೆಯನ್ನು ರಾಜಿ ಮಾಡಿಕೊಳ್ಳಲಾಗಿದೆ. ಇಂತಹ ಕಠೋರ ಪರಿಸ್ಥಿತಿಯಲ್ಲಿ ಮುಖ್ಯ ಕಾರ್ಯದರ್ಶಿಗಳು ನನ್ನನ್ನು ಭೇಟಿ ಮಾಡಿ ಕಾನೂನು ಹಾಗೂ ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು ಎಂದು ಟ್ವೀಟ್ ಮಾಡಿದ್ದಾರೆ. 

SCROLL FOR NEXT