ದೇಶ

ಅಮೃತಸರ: ಗೋಲ್ಡನ್ ಟೆಂಪಲ್ ನಲ್ಲಿ ಖಲಿಸ್ತಾನ್ ಪರ ಮೊಳಗಿದ ಘೋಷಣೆಗಳು!

Nagaraja AB

ಅಮೃತಸರ: ಇಲ್ಲಿನ ಗೋಲ್ಡನ್ ಟೆಂಪಲ್ ನಲ್ಲಿ ಶಿರೋಮಣಿ ಅಕಾಲಿ ದಳ (ಎಂಎಎನ್ಎನ್) ಬೆಂಬಲಿಗರು ಖಲಿಸ್ತಾನ್ ಪರ ಘೋಷಣೆಗಳನ್ನು ಮೊಳಗಿಸಿದ್ದಾರೆ. ಆಪರೇಷನ್ ಬ್ಲೂಸ್ಟಾರ್ ನ 37 ನೇ ವರ್ಷಾಚರಣೆ ಅಂಗವಾಗಿ ಭಾನುವಾರ ಬ್ಯಾನರ್ ಮತ್ತು ಭಿತ್ತಿಪತ್ರಗಳನ್ನು ಹಿಡಿದು ಅಪಾರ ಪ್ರಮಾಣದಲ್ಲಿ ಸೇರಿದ್ದ ಯುವಕರು, ಖಲಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದರು.

1984 ರಲ್ಲಿ ನಡೆದಿದ್ದ ಆಪರೇಷನ್ ಬ್ಲೂಸ್ಟಾರ್ ನ್ನು ಹತ್ಯಾಕಾಂಡ ಎಂದು ಬಣ್ಣಿಸಿದ ಜತೇದರ್ ಅಕಲ್ ತಖ್ತ್ ಜ್ಞಾನಿ ಹರ್ಪ್ರೀತ್ ಸಿಂಗ್, ಸಿಖ್ ಸಮುದಾಯದಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ಒತ್ತಿ ಹೇಳಿದರು.ಆಪರೇಷನ್ ಬ್ಲೂಸ್ಟಾರ್ ಸೈನ್ಯದ ಕಾರ್ಯಾಚರಣೆಯಾಗಿದ್ದು, 1984 ರಲ್ಲಿ ಗೋಲ್ಡನ್ ಟೆಂಪಲ್‌ನಿಂದ ಉಗ್ರರನ್ನು ಹೊರಹಾಕಲು ಇದನ್ನು ನಡೆಸಲಾಗಿತ್ತು.

ದೆಹಲಿಯಲ್ಲಿ ಜನವರಿ 26 ರಂದು ನಡೆದ ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ನಟ, ಹೋರಾಟಗಾರ ದೀಪ್ ಸಿಧು ಕೂಡಾ ಗೋಲ್ಡನ್ ಟೆಂಪಲ್ ನಲ್ಲಿ ಕಾಣಿಸಿಕೊಂಡರು.  ಈ ಕಾರ್ಯಕ್ರಮ ಸುಗಮವಾಗಿ ಸಾಗುವಂತೆ ಅಮೃತಸರದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. 

SCROLL FOR NEXT