ದೇಶ

ದೆಹಲಿಯ ಎಲ್ಲಾ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ನಿರ್ದಿಷ್ಟ ಮತಗಟ್ಟೆಗಳಲ್ಲಿ ಕೋವಿಡ್-19 ಲಸಿಕೆ: ಅರವಿಂದ್ ಕೇಜ್ರಿವಾಲ್ 

Sumana Upadhyaya

ನವದೆಹಲಿ: 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ 'ಜಹನ್ ವೋಟ್, ವಹನ್ ವ್ಯಾಕ್ಸಿನೇಷನ್ ಕ್ಯಾಂಪೈನ್' ಅಡಿಯಲ್ಲಿ ಲಸಿಕೆ ನೀಡಲು ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗಳಿಗೆ ಭೇಟಿ ನೀಡಿ ಲಸಿಕೆ ದಿನಾಂಕಗಳನ್ನು ನಿಗದಿಪಡಿಸಲಾಗುವುದು, ಇದಕ್ಕೆ ಮತಗಟ್ಟೆಗಳನ್ನು ಲಸಿಕಾ ಕೇಂದ್ರಗಳನ್ನಾಗಿ ಬದಲಾಯಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

45 ವರ್ಷಕ್ಕೆ ಮೇಲ್ಪಟ್ಟವರು 57 ಲಕ್ಷ ಮಂದಿ ದೆಹಲಿಯಲ್ಲಿದ್ದಾರೆ, ಅವರಲ್ಲಿ 27 ಲಕ್ಷ ಮಂದಿಗೆ ಮೊದಲ ಡೋಸ್ ನೀಡಲಾಗಿದ್ದು ಇನ್ನುಳಿದ 30 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಬೇಕಾಗಿದೆ ಎಂದು ಆನ್ ಲೈನ್ ಮೂಲಕ ಇಂದು ಮಾಹಿತಿ ನೀಡಿದ್ದಾರೆ.

ದೆಹಲಿ ಸರ್ಕಾರ ಸ್ಥಾಪಿಸಿರುವ ಲಸಿಕಾ ಕೇಂದ್ರಗಳಿಗೆ ಬರದಿರುವ 45 ವರ್ಷ ಮೇಲ್ಪಟ್ಟವರಿಗೆ, ಲಸಿಕೆಯ ಸದ್ಭಳಕೆ ಮಾಡಿಕೊಳ್ಳದವರಿಗೆ ನೊಟೀಸ್ ಕಳುಹಿಸಿದ್ದೇವೆ ಎಂದು ಕೂಡ ಕೇಜ್ರಿವಾಲ್ ಹೇಳಿದರು.

ದೆಹಲಿಯಲ್ಲಿ ಸುಮಾರು 280 ವಾರ್ಡ್ ಗಳಿವೆ. ಬೂತ್ ಮಟ್ಟದ ಅಧಿಕಾರಿಗಳು ನಾಳೆಯಿಂದ 72 ವಾರ್ಡ್ ಗಳಿಗೆ ಭೇಟಿ ನೀಡಿ ಅರ್ಹ 45 ವರ್ಷಕ್ಕೆ ಮೇಲ್ಪಟ್ಟವರನ್ನು ಗುರುತಿಸಿ ಲಸಿಕಾ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಮತಗಟ್ಟೆಗಳು ಜನರ ಮನೆಗಳಿಗೆ ಹತ್ತರವಿರುವುದರಿಂದ ಲಸಿಕೆ ಹಾಕಿಸಿಕೊಳ್ಳುಲು ದೂರ ಪ್ರಯಾಣ ಮಾಡಬೇಕಾಗಿಲ್ಲ. ಲಸಿಕಾ ಕೇಂದ್ರಗಳಿಗೆ ಬಂದು ಹೋಗಲು ಸರ್ಕಾರ ನಾಗರಿಕರಿಗೆ ಇ-ರಿಕ್ಷಾದ ವ್ಯವಸ್ಥೆ ಮಾಡಿದೆ ಎಂದರು.

SCROLL FOR NEXT