ದೇಶ

ಸುಮಾರು ಮೂರು ವಾರಗಳ ನಂತರ ದೆಹಲಿ ಮೆಟ್ರೋ ರೈಲು ಸೇವೆ ಪುನಾರಾರಂಭ!

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಣೆ ಹಿನ್ನೆಲೆಯಲ್ಲಿ ಸುಮಾರು ಮೂರು ವಾರಗಳ ನಂತರ ಮೆಟ್ರೋ ರೈಲು ಸೇವೆ ಇಂದಿನಿಂದ ಪುನರಾರಂಭವಾಗಿದೆ. ಆದರೆ, ಶೇ.50ರಷ್ಟು ಆಸನ ಸಾಮರ್ಥ್ಯಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಪ್ರಯಾಣಿಕರು ನಿಂತುಕೊಂಡು ಪ್ರಯಾಣಿಸುವಂತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೇ 20 ರಿಂದಲೂ ದೆಹಲಿ ಮೆಟ್ರೋ ರೈಲು ನಿಗಮ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಇದಕ್ಕೂ ಮುನ್ನ  ಏಪ್ರಿಲ್ 19 ರಂದು ಭಾಗಶ:ವಾಗಿ ಸೇವೆಯನ್ನು ನಿಲ್ಲಿಸಲಾಗಿತ್ತು. ಅವಶ್ಯಕ ಸೇವೆಗಳ ಜನರು ಮಾತ್ರ ಸಂಚರಿಸಲು ಅವಕಾಶ ನೀಡಲಾಗಿತ್ತು. ನಂತರ ಕೋವಿಡ್-19 ಎರಡನೇ ಅಲೆಯಲ್ಲಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮೇ 10ರಿಂದಲೂ ಅದನ್ನು ಕೂಡಾ ಸ್ಥಗಿತಗೊಳಿಸಲಾಗಿತ್ತು.

ಇಂದು ಬೆಳಗ್ಗೆ 6 ಗಂಟೆಯಿಂದ ಮೆಟ್ರೋ ರೈಲು ಸೇವೆ ಪುನಾರಾರಂಭವಾಗಿದೆ. ವಿವಿಧ ಮಾರ್ಗಗಳಲ್ಲಿ ಐದರಿಂದ 15 ನಿಮಿಷಗಳಿಗೆ ಒಂದು ರೈಲಿನಂತೆ ಕೇವಲ ಅರ್ಧದಷ್ಟು ರೈಲುಗಳು ಸೇವೆ ಆರಂಭಿಸಿರುವುದಾಗಿ ಡಿಎಂಆರ್ ಸಿ ಅಧಿಕಾರಿಗಳು ಹೇಳಿದ್ದಾರೆ.

ವಿವಿಧ ಸಡಿಲತೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಘೋಷಿದ ಬೆನ್ನಲ್ಲೇ, ಇಂದಿನಿಂದ ಅರ್ಧ ಸಾಮರ್ಥ್ಯದೊಂದಿಗೆ ಮೆಟ್ರೋ ರೈಲು ಸಂಚರಕ್ಕೆ ಅವಕಾಶ ಕಲ್ಪಿಸಲಾಗಿದೆ.

SCROLL FOR NEXT