ನುಸ್ರತ್ ಜಹಾನ್ 
ದೇಶ

ನಿಖಿಲ್ ಜೈನ್ ರೊಂದಿಗಿನ ಮದುವೆ ಕಾನೂನಾತ್ಮಕವಲ್ಲ, ಹೀಗಾಗಿ ವಿಚ್ಛೇದನ ಪ್ರಶ್ನೆ ಉದ್ಭವಿಸುವುದಿಲ್ಲ: ಟಿಎಂಸಿ ಸಂಸದೆ ನುಸ್ರತ್ ಜಹಾನ್

ನಿಖಿಲ್ ಜೈನ್ ರೊಂದಿಗಿನ ಮದುವೆ ಕಾನೂನಾತ್ಮಕವಲ್ಲ.. ಹೀಗಾಗಿ ಇಲ್ಲಿ ವಿಚ್ಛೇದನ ಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ.

ಕೋಲ್ಕತಾ: ನಿಖಿಲ್ ಜೈನ್ ರೊಂದಿಗಿನ ಮದುವೆ ಕಾನೂನಾತ್ಮಕವಲ್ಲ.. ಹೀಗಾಗಿ ಇಲ್ಲಿ ವಿಚ್ಛೇದನ ಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ.

ಪತಿ ನಿಖಿಲ್ ಜೈನ್ ರಿಂದ ದೂರ ಇರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ನುಸ್ರತ್ ಜಹಾನ್ ಅವರು, 'ನಿಖಿಲ್ ಜೈನ್​ರೊಂದಿಗೆ ತನ್ನ ವಿವಾಹವು ಭಾರತದ ಕಾನೂನು ವ್ಯವಸ್ಥೆ ಅಡಿಯಲ್ಲಿ ಯಾವತ್ತೂ ಮಾನ್ಯವಾಗಿರದ ಕಾರಣ ವಿಚ್ಛೇದನ ಪಡೆಯುವ ಅಗತ್ಯ ಸೃಷ್ಟಿಯಾಗದು ಎಂದು ಹೇಳಿದ್ದಾರೆ. 

'ತಮ್ಮ ಮದುವೆ ಅಂತರ್-ಧರ್ಮೀಯ ಮತ್ತು ಟರ್ಕಿ ದೇಶದ ಮದುವೆ ನಿಯಮಗಳ ಪ್ರಕಾರ ಆ ದೇಶದಲ್ಲಿ ನಡೆದಿದ್ದ ಕಾರಣ ಭಾರತದ ವಿಶೇಷ ಮದುವೆ ಕಾಯ್ದೆ ಅಡಿಯಲ್ಲಿ ಅದು ಅಮಾನ್ಯವಾಗುತ್ತದೆ. ಕಾನೂನಿನ ನ್ಯಾಯಾಲಯದ ಪ್ರಕಾರ ನಮ್ಮದು ಮದುವೆ ಆಗಿರದೆ, ಲಿವ್​-ಇನ್ ಸಂಬಂಧದ ಹಾಗೆ ಒಂದು ಸಂಬಂಧ ಮಾತ್ರ ಆಗಿತ್ತು. ಹಾಗಾಗಿ ಇಲ್ಲಿ ವಿಚ್ಛೇದನ ಪಡೆಯುವ ಪ್ರಶ್ನೆಯೇ ಉದ್ಭವಿಸುವವುದಿಲ್ಲ. ನಾವಿಬ್ಬರು ಬೇರ್ಪಟ್ಟು ಬಹಳ ವರ್ಷಗಳೇ ಆಗಿವೆ. ಆದರೆ ನನ್ನ ಖಾಸಗಿ ಬದುಕಿನ ವಿಷಯಗಳನ್ನು ಕೇವಲ ನನ್ನಷ್ಟಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಲು ನಾನು ಬಯಸುವದರಿಂದ ಅದರ ಬಗ್ಗೆ ಮಾತಾಡಿರಲಿಲ್ಲ. ನಮ್ಮ ಮದುವೆ ಕಾನೂನುಬದ್ಧ, ಅಂಗೀಕೃತ ಮತ್ತು ಸಮರ್ಥನೀಯ ಅಲ್ಲ. ಹಾಗಾಗಿ ಇದು ಕಾನೂನಿನ ದೃಷ್ಟಿಯಲ್ಲಿ ಮದುವೆ ಅಲ್ಲವೇ ಅಲ್ಲ, ಎಂದು ತಾವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ನುಸ್ರತ್ ಹೇಳಿದ್ದಾರೆ.

ತಮ್ಮ ಹೇಳಿಕೆಯಲ್ಲಿ ಯಾರದೇ ಹೆಸರನ್ನು ಉಲ್ಲೇಖಿಸದೆ, 'ತನ್ನನ್ನು ತಾನು ಶ್ರೀಮಂತನೆಂದು ಹೇಳಿಕೊಳ್ಳುವ 'ವ್ಯಕ್ತಿಯೊಬ್ಬ' ತನ್ನ ಬ್ಯಾಂಕ್ ಖಾತೆಯಿಂದ ಹಣ ತೆಗೆಯುತ್ತಿದ್ದಾನೆ. ಈ ವಿಷಯವನ್ನು ನಾನು ಈಗಾಗಲೇ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಮತ್ತು ಇಷ್ಟರಲ್ಲೇ  ಪೊಲೀಸ್ ಜೂರು​ ಸಹ ಸಲ್ಲಿಸಲಿದ್ದೇನೆ. ಇದಕ್ಕೆ ಮೊದಲು ನನ್ನ ಕುಟುಂಬದ ಎಲ್ಲ ಬ್ಯಾಂಕ್​ ಖಾತೆಗಳ ವಿವರಗಳನ್ನ ಅವನಿಗೆ ನೀಡಲಾಗಿತ್ತು ಮತ್ತು ಅವನ ಮನವಿಯ ಮೇರೆಗೆ ಈ ಖಾತೆಗಳಿಗೆ ಕುರಿತಂತೆ ಏನು ನಡೆಯತ್ತಿದೆ ಎನ್ನುವದನ್ನು ನಾನಗಾಗಲೀ ಆಥವಾ ನನ್ನ ಕುಟುಂಬದ ಯಾವುದೇ ಸದಸ್ಯನ  ಗಮನಕ್ಕಾಗಲೀ ಬಾರದಂತೆ ನೋಡಿಕೊಳ್ಳಲಾಗಿತ್ತು. ನನಗೆ ಗೊತ್ತಾಗದ ಹಾಗೆ ಮತ್ತು ನನ್ನ ಸಮ್ಮತಿಯಿಲ್ಲದೆ ಅವನು ನನ್ನ ಬೇರೆ ಬೇರೆ ಖಾತೆಗಳಿಂದ ಹಣ ದುರುಪಯೋಗ ಪಡಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕಿನವರೊಂದಿಗೆ ನನ್ನ ಹೋರಾಟ ಜಾರಿಯಲ್ಲಿದೆ ಮತ್ತು ಅಗತ್ಯ ಬಿದ್ದರೆ ಇದರ ಪುರಾವೆ  ಬಿಡುಗಡೆ ಮಾಡಲು ನಾನು ಸಿದ್ಧಳಿದ್ದೇನೆ' ಎಂದು ಆಕೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ತಮ್ಮ ಒಡವೆ ಮತ್ತು ಆಭರಣಗಳನ್ನು ಸಹ ಹಿಡಿದಿಟ್ಟುಕೊಳ್ಳಲಾಗಿದೆ ಎಂದು ಆರೋಪಿಸಿರುವ ಅವರು, ಕಠಿಣ ಪರಿಶ್ರಮದ ಮೂಲಕ ತಾನು ಬದುಕು ಕಟ್ಟಿಕೊಂಡಿದ್ದೇನೆ. ತಮ್ಮ ಖ್ಯಾತಿಯನ್ನು ಯಾವತ್ತೂ ಬೇರೆಯವರು ಹಂಚಿಕೊಳ್ಳಲು ಬಿಡಲಾರೆ. 'ನನ್ನ ವೈಯಕ್ತಿಕ ಬದುಕಿನ ಬಗ್ಗೆಯಾಗಲೀ ಅಥವಾ ನನಗೆ ಸಂಬಂಧಪಡದಿರುವವರ ಬಗ್ಗೆಯಾಗಲೀ ನಾನು ಯಾವತ್ತೂ ಮಾತಾಡುವುದಿಲ್ಲ. ಹಾಗಾಗಿ ತಮ್ಮನ್ನು ತಾವು 'ನಾರ್ಮಲ್ ಜನ' ಎಂದು ಕರೆದುಕೊಳ್ಳುವವರು ತಮಗೆ ಸಂಬಂಧಪಡದ ಯಾವುದೇ ವಿಷಯದಲ್ಲಿ ಮೂಗು ತೂರಿಸಬಾರದು. ಬಹಳ ಸಮಯದವರಗೆ ತನ್ನ ಬದುಕಿನ ಭಾಗವಾಗಿದ್ದ ಒಬ್ಬ ಅಸಮರ್ಥ ವ್ಯಕ್ತಿಯ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಕು ಎಂದು ನುಸ್ರತ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2019 ಸಾರ್ವತ್ರಿಕ ಚುನಾವಣೆಯಲ್ಲಿ ಬಸೀರತ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ ಕೆಲವೇ ದಿನಗಳ ನಂತರ ನಸ್ರತ್ ಅವರು ನಿಖಿಲ್​ ಜೈನ್​ ಅವರನ್ನು ಟರ್ಕಿಯ ಬೋದ್ರಮ್​ ಎಂಬ ಸ್ಥಳದಲ್ಲಿ ಮದುವೆಯಾಗಿದ್ದರು ಎಂದು ವರದಿಯಾಗಿತ್ತು. ರಾಜಕೀಯಕ್ಕೆ ಧುಮುಕುವ ಮೊದಲು ನುಸ್ರತ್ ಜಹಾನ್ ಅವರು ಬಂಗಾಳೀ ಸಿನಿಮಾ ರಂಗದಲ್ಲಿ ಸುಪ್ರಸಿದ್ಧ ನಟಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT