ದೇಶ

ಒಡಿಶಾ: ಚೆನ್ನೈ ಗೆ ತೆರಳುತ್ತಿದ್ದ ರೈಲಿನಲ್ಲಿದ್ದ ಆಕ್ಸಿಜನ್ ಕಂಟೈನರ್ ಸೋರಿಕೆ

Srinivas Rao BV

ಭುವನೇಶ್ವರ್: ಚೆನ್ನೈ ಗೆ ತೆರಳುತ್ತಿದ್ದ ರೈಲಿನಲ್ಲಿದ್ದ ಆಕ್ಸಿಜನ್ ಕಂಟೈನರ್ ಸೋರಿಕೆಯಾದ ಘಟನೆ ಒಡಿಶಾದ ಕೆಸಿಂಗ ರೈಲ್ವೆ ನಿಲ್ದಾಣದಲ್ಲಿ ವರದಿಯಾಗಿದೆ. 

ಬುಧವಾರ (ಜೂ.09) ರಂದು ಬೆಳಗಿನ ಜಾವ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ವರದಿಯಾಗಿದ್ದು, ರೌರ್ಕೆಲಾದಿಂದ 10 ಕಂಟೈನರ್ ಗಳನ್ನು ಹೊತ್ತಿದ್ದ ಸರಕು ಸಾಗಣೆ ರೈಲು ಚೆನ್ನೈ ನತ್ತ ಸಾಗುತ್ತಿತ್ತು.  ಈ ಮಧ್ಯ ರಾತ್ರಿ 2 ಗಂಟೆ ವೇಳೆಗೆ ಕಾಲಹಂದಿ ಜಿಲ್ಲೆಯ ಬಳಿ ರೈಲು ಬಂದಾಗ ಆಕ್ಸಿಜನ್ ಸೋರಿಕೆಯಾಗುತ್ತಿರುವುದು ಕಂಡುಬಂದಿದೆ. 

ತಕ್ಷಣವೇ ಎಚ್ಚೆತ್ತ ಲೋಕೋ ಪೈಲಟ್ ಸ್ಟೇಷನ್ ಮಾಸ್ಟರ್ ನ್ನು ಎಚ್ಚರಿಸಿದ್ದಾರೆ. ಮಾಹಿತಿ ಪಡೆದ ರೈಲ್ವೆ ಇಂಜಿನಿಯರ್ ಗಳು ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳು ಸೋರಿಕೆಯನ್ನು ತಡೆಯಲು ಮುಂದಾಗಿದ್ದಾರೆ. 

ಒಡಿಶಾದ ಫೈರ್ ಸರ್ವೀಸ್ ನ 7 ಸದಸ್ಯರ ತಂಡ ಸಹ ಕೆಸಿಂಗ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತು. ಪ್ರಾಥಮಿಕ ತನಿಖೆಯ ಪ್ರಕಾರ 6 ಕಂಟೈನರ್ ಗಳಲ್ಲಿನ ವಾಲ್ವ್ ಗಳಲ್ಲಿ ತಾಂತ್ರಿಕ ಕಾರಣಗಳಿಂದ ಸೋರಿಕೆ ಕಂಡುಬಂದಿದೆ. ದೋಷಗಳನ್ನು ಸರಿಪಡಿಸಿದ ಬಳಿಕ ಬೆಳಿಗ್ಗೆ 11:30 ರ ವೇಳೆಗೆ ರೈಲು ತನ್ನ ಸಂಚಾರವನ್ನು ಮುಂದುವರೆಸಿದೆ ಎಂದು ಹೇಳಿದೆ. 

SCROLL FOR NEXT