ರೈತ ನಾಯಕ ಟಿಕಾಯತ್ ಜೊತೆ ಮಮತಾ ಬ್ಯಾನರ್ಜಿ 
ದೇಶ

ನಿಮ್ಮ ಚಳುವಳಿ ಇಡೀ ದೇಶಕ್ಕಾಗಿ ಇದೆ: ರೈತರ ಪ್ರತಿಭಟನೆಗೆ ಮಮತಾ ಬೆಂಬಲ 

ಕೇಂದ್ರ ಸರ್ಕಾರ 2020 ರಲ್ಲಿ ಜಾರಿಗೆ ತಂದಿದ್ದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಕೋಲ್ಕತ್ತ: ಕೇಂದ್ರ ಸರ್ಕಾರ 2020 ರಲ್ಲಿ ಜಾರಿಗೆ ತಂದಿದ್ದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಸುತ್ತಿರುವ ರೈತರ ಪ್ರತಿಭಟನೆಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. 

ರಾಕೇಶ್ ಟಿಕಾಯತ್ ಹಾಗೂ ಯುಧ್ವೀರ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತನಾಡಿದ ಬಳಿಕ ಮಾತನಾಡಿರುವ ಮಮತಾ ಬ್ಯಾನರ್ಜಿ ರಾಜ್ಯಗಳು ನೀತಿಗಳ ವಿಷಯವಾಗಿ ಸಂವಾದ ನಡೆಸುವುದಕ್ಕೆ ವೇದಿಕೆ ಇರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ರಾಜ್ಯಗಳನ್ನು ಮೌನವಾಗಿಸುವುದು ಒಕ್ಕೂಟ ವ್ಯವಸ್ಥೆಗೆ ಒಳಿತಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಿಮ್ಮ ಚಳುವಳಿ ಇಡೀ ದೇಶಕ್ಕಾಗಿ ಇದೆ ನಿಮ್ಮ ಚಳುವಳಿಗೆ ಬೆಂಬಲ ಇದೆ ಎಂದು ಮಮತಾ ಬ್ಯಾನರ್ಜಿ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. 

ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಪಶ್ಚಿಮ ಬಂಗಾಳದಾಚೆಗೂ ವಿಸ್ತರಿಸುವ ಯೋಜನೆಯನ್ನು ಘೋಷಿಸಿದ ಬೆನ್ನಲ್ಲೇ ಉತ್ತರ ಭಾರತ ಮೂಲದ ರೈತ ಸಂಘಟನೆಗಳಿಗೆ ಟಿಎಂಸಿ ಬೆಂಬಲ ಘೋಷಿಸಿದೆ. ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೋ ವೋಟ್ ಫಾರ್ ಬಿಜೆಪಿ ಅಭಿಯಾನಕ್ಕೆ ಟಿಕಾಯತ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ ಹಾಗೂ ಸಿಂಗ್ ಬೆಂಬಲಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No Toll For Indian Tankers': ಅಮೆರಿಕ ದಿಗ್ಬಂಧನ ನಡುವೆ ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ಹಡಗು ಸಾಗಲು ಇರಾನ್ ಭರವಸೆ!

ರಾಮ ಮಂದಿರದಲ್ಲಿ 'ಸಾಂಕೇತಿಕ ಜ್ಯೋತಿ' ಹಿಂದೂ ಸಂಪ್ರದಾಯಕ್ಕೆ ವಿರುದ್ಧ: ಸ್ವಾಮಿ ಅವಿಮುಕ್ತೇಶ್ವರಾನಂದ್ ಆಕ್ಷೇಪ

Video: ಹಾಸನದಲ್ಲಿ ಸಿನಿಮೀಯ ಶೈಲಿಯ ವಿಚಿತ್ರ ಘಟನೆ; ಪತಿ, ಮಗು ತೊರೆದು ಕಾರಿನಲ್ಲೇ ಪ್ರಿಯಕರನ ಜತೆ ಮಹಿಳೆ ಮದುವೆ!

SIR ಗೆ ಆಕ್ಷೇಪ: ಪಶ್ಚಿಮ ಬಂಗಾಳ ಚುನಾವಣೆ ರದ್ದತಿಗೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ವಿರೋಧಿಗಳಿಗೆ ತೀವ್ರ ಹಿನ್ನಡೆ!

ಸರ್ಕಾರಿ ಗೌರವಗಳೊಂದಿಗೆ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

SCROLL FOR NEXT