ದೇಶ

ಅಲ್ಪಸಂಖ್ಯಾತರು ಕುಟುಂಬ ಯೋಜನೆ ಅಳವಡಿಸಿಕೊಳ್ಳುವಂತೆ ಅಸ್ಸಾಂ ಮುಖ್ಯಮಂತ್ರಿ ಒತ್ತಾಯ!

Nagaraja AB

ದಿಸ್ಪುರ: ಜನಸಂಖ್ಯೆ ನಿಯಂತ್ರಣದಿಂದ ಬಡತನ ಕಡಿಮೆಮಾಡಲು ಅಲ್ಪಸಂಖ್ಯಾತರು ಕುಟುಂಬ ಯೋಜನೆ ನೀತಿಯನ್ನು ಅಳವಡಿಸಿಕೊಳ್ಳುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ.

ಅಸ್ಸಾಂ ಸರ್ಕಾರಕ್ಕೆ 1 ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಜನಸಂಖ್ಯೆ ಹೆಚ್ಚಳದಿಂದಾಗಿ ಅಲ್ಪಸಂಖ್ಯಾತರಲ್ಲಿ ಬಡತನ ಹೆಚ್ಚಾಗಿದ್ದು, ಈ ಸಮುದಾಯದಲ್ಲಿನ ಬಡತನವನ್ನು ಕಡಿಮೆ ಮಾಡಲು ಸಮುದಾಯದ ಎಲ್ಲಾ ಪಾಲುದಾರರು ಮುಂದೆ ಬರಬೇಕು ಮತ್ತು ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. 

ಸರ್ಕಾರ ಎಲ್ಲಾ ಬಡ ಜನರ ಪೋಷಕ ಆದರೆ, ಬಡತನ, ಅನಕ್ಷರತೆ ಮತ್ತು ಸರಿಯಾದ ಕುಟುಂಬ ಯೋಜನೆಯ ಕೊರತೆಯ ಮೂಲ ಕಾರಣವಾಗಿರುವ ಜನಸಂಖ್ಯೆಯ ಬೆಳವಣಿಗೆಯ ಸಮಸ್ಯೆಯನ್ನು ನಿಭಾಯಿಸುವಲ್ಲಿ ಅಲ್ಪಸಂಖ್ಯಾತ ಸಮುದಾಯದ ಬೆಂಬಲ ಬೇಕು ಎಂದು ಅವರು ಹೇಳಿದರು.

ಸಮುದಾಯದ ಮಹಿಳೆಯರಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಕೆಲಸ ಮಾಡುತ್ತದೆ ಇದರಿಂದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು ಎಂದು ಶರ್ಮಾ ಹೇಳಿದರು.

SCROLL FOR NEXT