ದೇಶ

ಕೋವಿಡ್-19 ಎರಡನೇ ಅಲೆ ಹೊಡೆತ; 200 ಉದ್ಯೋಗಿಗಳ ವಜಾಗೊಳಿಸಿದ 'ಬುಕ್ ಮೈ ಶೋ'

Srinivasamurthy VN

ಬೆಂಗಳೂರು: ಕೋವಿಡ್-19 2ನೇ ಅಲೆಯ ಹೊಡೆತದಿಂದಾಗಿ ಖ್ಯಾತ ಮೂವಿ ಬುಕಿಂಗ್ ಪ್ಲಾಟ್‌ಫಾರ್ಮ್ ಬುಕ್ ಮೈ ಶೋ 200 ಉದ್ಯೋಗಿಗಳನ್ನು ವಜಾಗೊಳಿಸಿದೆ.

ಈ ಬಗ್ಗೆ ಸ್ವತಃ ಮುಂಬೈ ಮೂಲದ ಸ್ಟಾರ್ಟಪ್ ಬುಕ್ ಮೈ ಶೋ ಸಂಸ್ಥಾಪಕ ಮತ್ತು ಸಿಇಒ ಆಶಿಶ್ ಹೇಮ್ರಾಜನಿ ಅವರು ಗುರುವಾರ ಟ್ವೀಟ್ ಮಾಡಿದ್ದು, 'ಕೋವಿಡ್-19 ನನಗೆ ಅನೇಕ ಪಾಠಗಳನ್ನು ಕಲಿಸಿದೆ. ನಾನು ಇಂದು ಇನ್ನೊಂದು ಪಾಠವನ್ನು ಕಲಿತಿದ್ದೇನೆ. ಸಂಸ್ಥೆಯ 200 ಉದ್ಯೋಗಿಗಳನ್ನು  ವಜಾಗೊಳಿಸುತ್ತಿದ್ದೇವೆ. ಅವರು ಕಳೆದ 15 ತಿಂಗಳುಗಳಿಂದ ಸಂಸ್ಥೆಗಾಗಿ ದುಡಿದಿದ್ದಾರೆ. ಅದಕ್ಕಾಗಿ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ. 

ಅಂತೆಯೇ ತಮ್ಮದೇ ಬುಕ್ ಸ್ಮೈಲ್ ಇಂಡಿಯಾ ಟಾರಿಟಿ ಮೂಲಕ 10ಲಕ್ಷ ಮಂದಿಗೆ ನೆರವು ನೀಡಲಾಗುತ್ತಿದೆ ಎಂದೂ ಹೇಮ್ರಾಜನಿ ಟ್ವೀಟ್ ಮಾಡಿದ್ದಾರೆ.

ಇನ್ನು ಇದೇ ಸಂಸ್ಥೆ ಈ ಹಿಂದೆಯೂ ಕೂಡ ಅಂದರೆ ಕೊವಿಡ್ ಸಾಂಕ್ರಾಮಿಕದ ಮೊದಲ ಅಲೆ ವೇಳೆ 270 ಮಂದಿಯನ್ನು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಇದೀಗ 2ನೇ ಅಲೆ ವೇಳೆ 200 ಮಂದಿಯನ್ನು ವಜಾಗಳಿಸಿದೆ. ಅದರಂತೆ ಸಂಸ್ಥೆಯು ಈಗ ದೇಶಾದ್ಯಂತ ತನ್ನ 1500 ಉದ್ಯೋಗಿಗಳಲ್ಲಿ ಶೇ31  ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದಂತಾಗಿದೆ. 

SCROLL FOR NEXT