ದೇಶ

ಲಸಿಕೆ ಪೋಲು: ಜಾರ್ಖಂಡ್ ನಲ್ಲಿ ಅತಿಹೆಚ್ಚು; ಕೇರಳ, ಪಶ್ಚಿಮ ಬಂಗಾಳದಲ್ಲಿ ಪೋಲು ಇಲ್ಲವೇ ಇಲ್ಲ; ಇಲ್ಲಿದೆ ಇತರ ರಾಜ್ಯಗಳ ಮಾಹಿತಿ!

Srinivas Rao BV

ನವದೆಹಲಿ: ಜೂ.21 ರಿಂದ ಹೊಸ ಲಸಿಕೆ ನೀತಿ ಜಾರಿಗೆ ಬರಲಿದ್ದು, ಇದಕ್ಕೂ ಮುನ್ನ ಮೇ ತಿಂಗಳಲ್ಲಿ ರಾಜ್ಯವಾರು ಲಸಿಕೆಗಳು ಪೋಲಾಗಿರುವ ಮಾಹಿತಿ ಲಭ್ಯವಾಗಿದೆ. 

ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಲಸಿಕೆ ಬಳಕೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಲಸಿಕೆ ಪೋಲು ಋಣಾತ್ಮಕ ಶ್ರೇಣಿಯಲ್ಲಿರುವುದು ಗಮನಾರ್ಹವಾಗಿದೆ. 1.10 ಲಕ್ಷ. 1.61 ಲಕ್ಷ ಡೊಸ್ ಗಳನ್ನು ಅನುಕ್ರಮವಾಗಿ ಎರಡೂ ರಾಜ್ಯಗಳು ಪೋಲಾಗುವುದರಿಂದ ತಪ್ಪಿಸಿ ಉಳಿಸಿದ್ದರೆ, ಜಾರ್ಖಂಡ್ ರಾಜ್ಯ ಅತಿ ಹೆಚ್ಚು ಅಂದರೆ ಶೇ.33.95 ರಷ್ಟು ಲಸಿಕೆಯನ್ನು ಪೋಲು ಮಾಡಿದೆ. ಕೇರಳ ಶೇ.-6.37 ರಷ್ಟು ಲಸಿಕೆಯನ್ನು ಪೋಲು ಮಾಡಿದ್ದರೆ, ಪಶ್ಚಿಮ ಬಂಗಾಳ ಶೇ.-5.48 ರಷ್ಟು ಲಸಿಕೆಯನ್ನು ಪೋಲು ಮಾಡಿದೆ. 

ಚತ್ತೀಸ್ ಗಢ ಶೇ.15.79 ರಷ್ಟು ಲಸಿಕೆ, ಮಧ್ಯಪ್ರದೇಶದಲ್ಲಿ ಶೇ.7.35 ರಷ್ಟು ಲಸಿಕೆ ಪೋಲಾಗಿದ್ದರೆ, ಪಂಜಾಬ್, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರಗಳಲ್ಲಿ ಅನುಕ್ರಮವಾಗಿ ಶೇ.7.08, ಶೇ.3.95, ಶೇ.3.91, ಶೇ.3.78, ಶೇ.3.63, ಶೇ. 3.59 ರಷ್ಟು ಲಸಿಕೆ ಪೋಲಾಗಿದೆ. 

ಅಂಕಿ-ಅಂಶಗಳ ಪ್ರಕಾರ ಮೇ ತಿಂಗಳಲ್ಲಿ 790 ಲಕ್ಷ ಲಸಿಕೆಗಳು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜಾಗಿದ್ದು, 658.6 ಲಕ್ಷ ಡೋಸ್ ಗಳು ಬಳಕೆಯಾಗಿದ್ದರೆ 212.7 ಲಕ್ಷ ಲಸಿಕೆಗಳು ಉಳಿದಿದ್ದವು. ಏಪ್ರಿಲ್ ತಿಂಗಳಿಗೆ ಹೋಲಿಕೆ ಮಾಡಿದರೆ ಮೇ ತಿಂಗಳಲ್ಲಿ ಲಸಿಕೆ ಪಡೆದವರ ಸಂಖ್ಯೆ ಕಡಿಮೆಯಾಗಿದ್ದು, 80.8 ಲಕ್ಷ ಲಸಿಕೆ ಉಳಿದಿದೆ. 

SCROLL FOR NEXT