ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳ ಸಾಂದರ್ಭಿಕ ಚಿತ್ರ 
ದೇಶ

ಯುಪಿಎಸ್ ಸಿ ನಾಗರಿಕ ಸೇವೆಗಳ ಪರೀಕ್ಷೆ ಸಂದರ್ಶನ ಆಗಸ್ಟ್ 2 ರಿಂದ ಪ್ರಾರಂಭ

ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದ ಮುಂದೂಡಲಾಗಿದ್ದ 2020ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಸಂದರ್ಶನವನ್ನು ಆಗಸ್ಟ್ 2ರಿಂದ ಆರಂಭಿಸಲು ಕೇಂದ್ರ ನಾಗರಿಕ ಸೇವಾ ಆಯೋಗ ಯುಪಿಎಸ್ ಸಿ ನಿರ್ಧರಿಸಿದೆ ಎಂದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ

ನವದೆಹಲಿ: ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದ ಮುಂದೂಡಲಾಗಿದ್ದ 2020ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಸಂದರ್ಶನವನ್ನು ಆಗಸ್ಟ್ 2ರಿಂದ ಆರಂಭಿಸಲು ಕೇಂದ್ರ ನಾಗರಿಕ ಸೇವಾ ಆಯೋಗ ಯುಪಿಎಸ್ ಸಿ ನಿರ್ಧರಿಸಿದೆ ಎಂದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ.

ಭಾರತೀಯ ಆಡಳಿತ ಸೇವೆ (ಐಎಎಸ್) ಭಾರತೀಯ ವಿದೇಶಾಂಗ ಸೇವೆ (ಐಎಫ್ ಎಸ್ ) ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದಂತೆ ಮತ್ತಿತರ ಅಧಿಕಾರಿಗಳ ಆಯ್ಕೆಗಾಗಿ ವಾರ್ಷಿಕವಾಗಿ ಪೂರ್ವಭಾವಿ, ಮುಖ್ಯ ಹಾಗೂ ಸಂದರ್ಶನವನ್ನು ಯುಪಿಎಸ್ ಸಿ ನಡೆಸುತ್ತಿದೆ.ಆದರೆ, ಕೊರೋನಾವೈರಸ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಈ ವರ್ಷದ ಏಪ್ರಿಲ್ ನಲ್ಲಿ  ಸಂದರ್ಶವನ್ನು ಮುಂದೂಡಲಾಗಿತ್ತು.

ಪರಿಸ್ಥಿತಿ ಪರಾಮರ್ಶೆ ನಡೆಸಿದ ಬಳಿಕ ಆಗಸ್ಟ್ 2ರಿಂದ ನಾಗರಿಕ ಸೇವಾ ಪರೀಕ್ಷೆಯ ಸಂದರ್ಶನವನ್ನು ಆರಂಭಿಸಲು ಆಯೋಗ ನಿರ್ಧರಿಸಿದೆ ಎಂದು ಯುಪಿಎಸ್ ಸಿ ಮಾಹಿತಿ ನೀಡಿದೆ.

ಸಂದರ್ಶನಕ್ಕಾಗಿ ಆಯ್ಕೆಯಾದ ಅಭ್ಯರ್ಥಿಗಳ ಇ-ಸಮನ್ ಪತ್ರಗಳು ಶೀಘ್ರದಲ್ಲೇ ದೊರೆಯಲಿವೆ. ಆಯೋಗದ ವೆಬ್ ಸೈಟ್ www.upsc.gov.in and www.upsconline.in, it said. ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ ತಿಳಿಸಲಾದ ಸಂದರ್ಶನ ಪರೀಕ್ಷೆ ದಿನಾಂಕ ಮತ್ತು ಸಮಯದ ಬದಲಾವಣೆಗೆ ಯಾವುದೇ ಮನವಿಯನ್ನು  ಸಮ್ಮತಿಸುವುದಿಲ್ಲ ಎಂದು ಆಯೋಗ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

"RSS ನಲ್ಲಿ ಜೆನ್ ಝೀಗಳೇ ಅತಿ ದೊಡ್ಡ ಸಂಖ್ಯೆ": ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್

kerala: ಸ್ಕೂಟರ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ: 4 ಮಂದಿಗೆ ಗಂಭೀರ ಗಾಯ, Video

ತುಮಕೂರು: ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ; ಕಾರಣ ನಿಗೂಢ!