ದೇಶ

ತೈಲ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಮುಖಂಡರ ಪ್ರತಿಭಟನೆ

Nagaraja AB

ನವದೆಹಲಿ: ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ದೇಶದ ವಿವಿಧೆಡೆ ಪೆಟ್ರೋಲ್ ಬಂಕ್ ಗಳ ಬಳಿ ಪ್ರತಿಭಟನೆ ನಡೆಸಿದರು.

ಪಕ್ಷದ ಮುಖಂಡರಾದ ಕೆ ಸಿ ವೇಣುಗೋಪಾಲ್ ಮತ್ತು ಶಕ್ತಿ ಸಿಂಗ್ ಗೋಹಿಲ್ ಕುದುರೆ ಗಾಡಿಯಲ್ಲಿ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಪೆಟ್ರೋಲ್ ಬಂಕ್ ತಲುಪಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ರೂ.9.20 ಪೈಸೆ ಇದದ್ದು, ಇದೀಗ ರೂ.32 ತಲುಪಿದೆ ಎಂದು ವೇಣುಗೋಪಾಲ್ ಹೇಳಿದರು.

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಶುಂಕ ಹಾಕುವುದನ್ನು ಸರ್ಕಾರ ನಿಲ್ಲಿಸಬೇಕು, ಇದು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಬರಬೇಕು. ಇಂಧನ ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಬೇಕೆಂದು ವೇಣುಗೋಪಾಲ್ ಹೇಳಿದರು. ಅಜಯ್ ಮಾಕೆನ್ ನೇತೃತ್ವದಲ್ಲಿ ರಾಜಿಂದರ್ ನಗರ ಮತ್ತು ಜನ ಪಥ್ ನಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಯಿತು.

ಈ ಮಧ್ಯೆ ಬಿಜೆಪಿ ಲೂಟಿಂಗ್ ಇಂಡಿಯಾ ಹ್ಯಾಷ್ ಟಾಗ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಜಿಡಿಪಿ ಕುಸಿತ, ನಿರುದ್ಯೋಗ ಹೆಚ್ಚಳ, ಗಗನಕ್ಕೇರುತ್ತಿರುವ ತೈಲ ಬೆಲೆ, ಬಿಜೆಪಿ ದೇಶದಲ್ಲಿ ಲೂಟಿ ಮಾಡಲು ಇನ್ನೂ ಎಷ್ಟು ಮಾರ್ಗಗಳಿವೆ ಎಂದು ಕೇಳಿದ್ದಾರೆ. ಶುಕ್ರವಾರ ಪೆಟ್ರೋಲ್ ಬೆಲೆ ಮತ್ತೆ 31 ಪೈಸೆ, ಡೀಸೆಲ್ ಬೆಲೆ 28 ಪೈಸೆಗೆ ಹೆಚ್ಚಳವಾಗಿದೆ.

ಅಬಕಾರಿ ಸುಂಕವನ್ನು ಕಡಿತ ಮಾಡುವ ತೈಲ ಬೆಲೆಯಲ್ಲಿ ಕನಿಷ್ಠ 25 ರೂಪಾಯಿಯಾದರೂ ಕಡಿಮೆ ಮಾಡಿ ಎಂದು ಭೂಪಾಲ್ ನಲ್ಲಿ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದರು. ಈ ಮಧ್ಯೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆಎಸ್ ಅಳಗಿರಿ ನೇತೃತ್ವದಲ್ಲಿ ಚೆನ್ನೈನಲ್ಲಿ ಪ್ರತಿಭಟನೆ ನಡೆಯಿತು. ಪಂಜಾಬ್, ರಾಜಸ್ಥಾನ, ಕೇರಳ, ಛತ್ತೀಸ್ ಗಢ, ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ತೈಲ ಬೆಲೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.

SCROLL FOR NEXT