ದೇಶ

ಬಡತನ ಕಡಿಮೆ ಮಾಡಲು ಕುಟುಂಬಗಳನ್ನು ಚಿಕ್ಕದಾಗಿರಿಸಿಕೊಳ್ಳಿ: ಮುಸ್ಲಿಮರಿಗೆ ಅಸ್ಸಾಂ ಸಿಎಂ ಸಲಹೆ

Shilpa D

ಗುವಾಹಟಿ: ಬಡತನ ಹಾಗೂ ಇತರ ಸಾಮಾಜಿಕ ಸಮಸ್ಯೆಗಳನ್ನು ಕಡಿಮೆ ಮಾಡಲು ಕುಟುಂಬವನ್ನು ಚಿಕ್ಕದಾಗಿರಿಸಿಕೊಳ್ಳಬೇಕೆಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಸ್ಲಿಮರಿಗೆ ಸಲಹೆ ನೀಡಿದ್ದಾರೆ.

ಜನಸಂಖ್ಯೆಯನ್ನು ನಿಯಂತ್ರಿಸಲು ನಾವು ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯದೊಂದಿಗೆ ಕೆಲಸ ಮಾಡಲು ಬಯಸುತ್ತೇವೆ ಎಂದು ಹೇಳಿದ ಅವರು, ಬಡತನ ಭೂ ಅತಿಕ್ರಮಣ ಮುಂತಾದ ಮೂಲ ಸಮಸ್ಯೆಗಳಿಗೆ ಜನಸಂಖ್ಯೆಯೇ ಮೂಲ ಕಾರಣ ಎಂದರು.

ಮುಸ್ಲಿಂ ಸಮುದಾಯವು ಯೋಗ್ಯವಾದ ಕುಟುಂಬ ಯೋಜನೆ ಅಳವಡಿಸಿಕೊಂಡರೇ ನಾವು ಹಲವು ಸಾಮಾಜಿಕ ಸಮಸ್ಯೆಗಳನ್ನು ಕೊನೆಗಾಣಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.200 ಅತಿಕ್ರಮಣದಾರರನ್ನು, ಹೆಚ್ಚಾಗಿ ವಲಸೆ ಬಂದ ಮುಸ್ಲಿಮರನ್ನು ಹೊರಹಾಕುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಅಲ್ಪಸಂಖ್ಯಾತ ಆಧಾರಿತ ರಾಜಕೀಯ ಪಕ್ಷ ಎಐಯುಡಿಎಫ್ ಮತ್ತು ಆಲ್ ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಒಕ್ಕೂಟವನ್ನು ಜನಸಂಖ್ಯಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವಂತೆ ಒತ್ತಾಯಿಸಿದ್ದಾರೆ. ಮುಂದೊಂದು ದಿನ ಜನ ಕಾಮಾಕ್ಯ ದೇವಾಲಯದ ಭೂಮಿಯಲ್ಲಿ ವಾಸಿಸುವ ಪರಿಸ್ಥಿತಿ ಬರಬಹುದು ಎಂದು ತಿಳಿಸಿದ್ದಾರೆ.

SCROLL FOR NEXT