ದೇಶ

ಟಿಎಂಸಿ ಬಲಪಡಿಸಲು ಅಲ್ಲ, ಬಿಜೆಪಿಯನ್ನು ಕುಗ್ಗಿಸಲು?: ಮುಕುಲ್ ರಾಯ್ 'ಘರ್ ವಾಪ್ಸಿ'ಗೆ ಮಮತಾ ಸ್ವಾಗತ!

Vishwanath S

ಕೋಲ್ಕತಾ: ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರು ಮತ್ತೆ ಟಿಎಂಸಿಗೆ 'ಘರ್ ವಾಪ್ಸಿ' ಮಾಡಿರುವುದನ್ನು ಸ್ವಾಗತಿಸಲು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಮಮತಾ ಬ್ಯಾನರ್ಜಿ ಅವರು, ನಿಮ್ಮ ನಿರ್ಧಾರವು ಟಿಎಂಸಿ ಪಕ್ಷವನ್ನು ಬಲಪಡಿಸುವುದಕ್ಕಿಂತ ಬಿಜೆಪಿಯನ್ನು ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ. 

ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಕಳಪೆ ಪ್ರದರ್ಶನದ ನಂತರ ಮುಕುಲ್ ರಾಯ್ ಟಿಎಂಸಿಗೆ ಸೇರ್ಪಡೆಗೊಂಡಿರುವುದು ಬಿಜೆಪಿಗೆ ಮೊದಲ ಹೊಡೆತವಾಗಿದೆ. 

ಇನ್ನು ಇದು ಕೇಸರಿ ಶಿಬಿರಕ್ಕೆ ಪಕ್ಷಾಂತರಗೊಂಡ ಇತರರಿಗೆ ಸಂದೇಶವೊಂದನ್ನು ರವಾನಿಸಿದೆ ಎಂದು ಆಡಳಿತ ಪಕ್ಷದ ಮೂಲಗಳು ತಿಳಿಸಿವೆ. "ಅನೇಕ ಟಿಎಂಸಿ ನಾಯಕರು ಬಿಜೆಪಿಗೆ ಹೋಗಿದ್ದರು. ಅಲ್ಲದೆ ಅಲ್ಲಿ ಪ್ರಮುಖ ಸ್ಥಾನಗಳಿಗೆ ಆಯ್ಕೆಯಾಗಿದ್ದರು. ರಾಯ್ ಟಿಎಂಸಿಗೆ ಹಿಂದಿರುಗುವುದರಿಂದ ಇನ್ನೂ ಹಲವು ಬಿಜೆಪಿ ನಾಯಕರು, ಶಾಸಕರು ಮತ್ತೆ ಘರ್ ವಾಪ್ಸಿ ಮಾಡಲಿದ್ದಾರೆ ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದರು.

ಕೇಸರಿ ಶಿಬಿರದ 'ಚಾಣಕ್ಯ'ನನ್ನು ಮತ್ತೆ ತನ್ನ ಪಕ್ಷಕ್ಕೆ ತಂದು, ಆಡಳಿತ ಪಕ್ಷವು ಈಗ ಬಂಗಾಳದಲ್ಲಿ ಬಿಜೆಪಿಯ ಅಡಿಪಾಯವನ್ನು ಅಲುಗಾಡಿಸುವ ಗುರಿಯನ್ನು ಹೊಂದಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಯ ಏಕೈಕ ವಿರೋಧವಾಗಿ ಕೇಸರಿ ಶಿಬಿರ ಹೊರಹೊಮ್ಮಿದ್ದು, ಇದು 77 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಟಿಎಂಸಿ ಪಕ್ಷವು 200ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದೆ. 

ರಾಯ್ ತಮ್ಮ ರಾಜಕೀಯ ನಿಷ್ಠೆಯನ್ನು 2017ರಲ್ಲಿ ಬಿಜೆಪಿಗೆ ವರ್ಗಾಯಿಸಿದ್ದರಿಂದ, ಒಟ್ಟು 33 ಟಿಎಂಸಿ ಶಾಸಕರು ಬಿಜೆಪಿಗೆ ಸೇರಿದರು. ಇದೀಗ ರಾಯ್ ಟಿಎಂಸಿಗೆ ಹಿಂದಿರುಗುವುದು ಚುನಾವಣೆಯ ನಂತರ ಕೇಸರಿ ಶಿಬಿರದಿಂದ ಹೊರಬಂದ ಮೊದಲ ಪಕ್ಷಾಂತರವಾಗಿದೆ.

SCROLL FOR NEXT