ದೇಶ

ಭಾರತ, ಚೀನಾ, ಪಾಕಿಸ್ತಾನ ರಾಷ್ಟ್ರಗಳಿಂದ ಪರಮಾಣು ಶಸ್ತ್ರಾಗಾರ ವಿಸ್ತರಣೆ: ಎಸ್ಐಪಿಆರ್ ಐ ಅಧ್ಯಯನ ವರದಿ

Srinivas Rao BV

ನವದೆಹಲಿ: ಚೀನಾ, ಪಾಕಿಸ್ತಾನ, ಭಾರತ ಅನುಕ್ರಮವಾಗಿ 350, 165, 156 ಅಣ್ವಸ್ತ್ರ ಸಿಡಿತಲೆಗಳನ್ನು ಈ ವರ್ಷದ ಜನವರಿ ತಿಂಗಳವರೆಗೂ ಹೊಂದಿದ್ದು ಮೂರೂ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ವಿಸ್ತರಿಸುತ್ತಿವೆ ಎಂದು ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎಸ್ ಐಪಿಆರ್ ಐ) ಹೇಳಿದೆ.

ತನ್ನ ಅಧ್ಯಯನದ ಪ್ರಕಾರ ರಷ್ಯಾ ಹಾಗೂ ಅಮೆರಿಕ ಎರಡು ರಾಷ್ಟ್ರಗಳು ಜಾಗತಿಕವಾಗಿರುವ 13,080 ಪರಮಾಣು ಶಸ್ತ್ರಾಸ್ತ್ರಗಳ ಪೈಕಿ ಶೇ.90 ರಷ್ಟನ್ನು ಹೊಂದಿವೆ ಎಂದು ಎಸ್ ಐಪಿಆರ್ ಐ ಹೇಳಿದೆ.

ಜಾಗತಿಕವಾಗಿ 9 ರಾಷ್ಟ್ರಗಳು- ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್, ಉತ್ತರ ಕೊರಿಯಾಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ.

ಚೀನಾ ತನ್ನ ಶಸ್ತ್ರಾಸ್ತ್ರಗಳ ಶಸ್ತ್ರಾಗಾರವನ್ನು ಆಧುನೀಕರಣಗೊಳಿಸುವ, ವಿಸ್ತರಿಸುವ ಮಹತ್ವದ ಘಟ್ಟಾದಲ್ಲಿದ್ದು, ಭಾರತ, ಪಾಕಿಸ್ತಾನಗಳೂ ಸಹ ತಮ್ಮ ಶಸ್ತ್ರಾಗಾರವನ್ನು ವಿಸ್ತರಿಸುತ್ತಿರುವಂತಿದೆ ಎಂದು ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ.

ಭಾರತ ಚೀನಾ, ಪಾಕಿಸ್ತಾನದೊಂದಿಗೆ ಇತ್ತೀಚಿನ ದಿನಗಳಲ್ಲೂ ಸಂಘರ್ಷ ಎದುರಿಸಿದೆ.

ಇನ್ನು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವುದಕ್ಕೆ ಬಳಕೆ ಮಾಡಲಾಗುವ ಕಚ್ಚಾ ವಸ್ತುಗಳ ಬಗ್ಗೆತೂ ಈ ವರದಿ ಬೆಳಕು ಚೆಲ್ಲಿದ್ದು, ಉನ್ನತ ಮಟ್ಟದಲ್ಲಿ ಅಭಿವೃದ್ಧಿಗೊಳಿಸಿದ ಯುರೇನಿಯಂ (HEU) ಅಥವಾ ಪ್ರತ್ಯೇಕಿಸಿದ ಪ್ಲುಟೋನಿಯಂ ನ್ನು ಪರಮಾಣು ಅಸ್ತ್ರಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. 

ಭಾರತ ಮತ್ತು ಇಸ್ರೇಲ್ ಪ್ಲುಟೋನಿಯಂ ನ್ನು ಬಳಸಿದರೆ ಪಾಕಿಸ್ತಾನ HEU ನ್ನು ಬಳಕೆ ಮಾಡಲಿದೆ, ಆದರೆ ಪ್ಲುಟೋನಿಯಂ ನ್ನು ಉತ್ಪಾದಿಸುವುದಕ್ಕೆ ಪಾಕ್ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್, ಅಮೆರಿಕಾಗಳು ಎರಡೂ ವಸ್ತುಗಳನ್ನೂ ಬಳಕೆ ಮಾಡುತ್ತಿವೆ. 

SCROLL FOR NEXT