ದೇಶ

ಕೋವಿಡ್-19 ವಾರಿಯರ್ಸ್ ಕೌಶಲ್ಯಾಭಿವೃದ್ಧಿಗೆ ಕೇಂದ್ರ ಸರ್ಕಾರದ ಕಾರ್ಯಕ್ರಮ: ಪ್ರಧಾನಿ ಮೋದಿ ನಾಳೆ ಉದ್ಘಾಟನೆ

Sumana Upadhyaya

ನವದೆಹಲಿ: ಕೋವಿಡ್-19 ಮುಂಚೂಣಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ನಾಳೆ ಕಸ್ಟಮೈಸ್ಡ್ ಕ್ರ್ಯಾಶ್ ಕೋರ್ಸ್(ಸಿಸಿಸಿ) ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ದೇಶದ 26 ಜಿಲ್ಲೆಗಳಲ್ಲಿ 111 ತರಬೇತಿ ಕೇಂದ್ರಗಳಲ್ಲಿ ಇದು ಆರಂಭವಾಗಲಿದೆ. ಚಾಲನೆ ನೀಡಿದ ನಂತರ ಪ್ರಧಾನಿಯವರು ಭಾಷಣ ಮಾಡಲಿದ್ದಾರೆ. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲ ಸಚಿವರು ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ.

ಈ ಕಾರ್ಯಕ್ರಮವು ದೇಶಾದ್ಯಂತ ಒಂದು ಲಕ್ಷ ಕೋವಿಡ್ ಯೋಧರ ಕೌಶಲ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹೋಮ್ ಕೇರ್ ಸಪೋರ್ಟ್, ಬೇಸಿಕ್ ಕೇರ್ ಸಪೋರ್ಟ್, ಅಡ್ವಾನ್ಸ್ಡ್ ಕೇರ್ ಸಪೋರ್ಟ್, ಎಮರ್ಜೆನ್ಸಿ ಕೇರ್ ಸಪೋರ್ಟ್, ಸ್ಯಾಂಪಲ್ ಕಲೆಕ್ಷನ್ ಸಪೋರ್ಟ್, ಮತ್ತು ಮೆಡಿಕಲ್ ಎಕ್ವಿಪ್ಮೆಂಟ್ ಸಪೋರ್ಟ್ ಎಂಬ ಆರು ಕಸ್ಟಮೈಸ್ ಮಾಡಿದ ಉದ್ಯೋಗ ಪಾತ್ರಗಳಲ್ಲಿ ಕೋವಿಡ್ ಯೋಧರಿಗೆ ತರಬೇತಿಯನ್ನು ನೀಡಲಾಗುವುದು.

ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಅಡಿಯಲ್ಲಿ ಈ ಕಾರ್ಯಕ್ರಮವನ್ನು ವಿಶೇಷ ಕಾರ್ಯಕ್ರಮವಾಗಿ ವಿನ್ಯಾಸಗೊಳಿಸಲಾಗಿದ್ದು, ಒಟ್ಟು 276 ಕೋಟಿ ರೂಪಾಯಿ ವೆಚ್ಚದ್ದಾಗಿದೆ. ಈ ಕಾರ್ಯಕ್ರಮವು ಆರೋಗ್ಯ ಕ್ಷೇತ್ರದಲ್ಲಿ ಮಾನವಶಕ್ತಿಯ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು ನುರಿತ ವೈದ್ಯಕಿಯೇತರ ಆರೋಗ್ಯ ಕಾರ್ಯಕರ್ತರನ್ನು ರೂಪಿಸುತ್ತದೆ.

SCROLL FOR NEXT