ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಆಲೋಪತಿ ಬಗ್ಗೆ ಅವಹೇಳನ: ಛತ್ತೀಸ್ ಗಡ ಪೊಲೀಸರಿಂದ ಬಾಬಾ ರಾಮದೇವ್ ವಿರುದ್ಧ ಎಫ್ ಐಆರ್ ದಾಖಲು

ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕವು ನೀಡಿದ ದೂರಿನ ಮೇರೆಗೆ ಬಾಬಾ ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬಾಬಾ ರಾಮದೇವ್
Shilpa D
Updated On : 17 Jun 2021, 1:55 pm

ರಾಯಪುರ: ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕವು ನೀಡಿದ ದೂರಿನ ಮೇರೆಗೆ ಬಾಬಾ ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ವಿವಿಧ ಕಲಂ ಗಳ ಅಡಿಯಲ್ಲಿ ಬಾಬಾರಾಮ್ ದೇವ್ ವಿರುದ್ಧ ಛತ್ತೀಸ್ ಗಡ ಐಎಂಎ ಅಧ್ಯಕ್ಷ ಡಾ.ರಾಕೇಶ್ ಗುಪ್ತ ದೂರು ದಾಖಲಿಸಿದ್ದರು, ದೂರನ್ನು ಪರಿಶಿಲಿಸಿದ ನಂತರ  ಐಫ್ ಐ ಆರ್ ದಾಖಲಿಸಿರುವುದಾಗಿ ರಾಯಪುರ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ಸ್ 186, 188 ಮತ್ತು 270 , 504 ಮತ್ತು 2005ರ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಎಫ್ ಐ ಆರ್ ದಾಖಲಿಸಲಾಗಿದೆ. ಅಲೋಪತಿಯ ವೈದ್ಯ ಪದ್ಧತಿ ಬಗ್ಗೆ  ಮಾಡಿದ ಟೀಕೆಗಳಿಗಾಗಿ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ಧ ರಾಯಪುರ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಿಸಲಾಗಿತ್ತು ಎಂದು ಡಾ.ಗುಪ್ತಾ ಹೇಳಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement