ರಫೇಲ್ 
ದೇಶ

2022 ರೊಳಗೆ ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆ: ಐಎಎಫ್ ಮುಖ್ಯಸ್ಥ

2022ರೊಳಗೆ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗುವುದು ಎಂದು ಐಎಎಫ್ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ತಿಳಿಸಿದ್ದಾರೆ.

ಹೈದರಾಬಾದ್‌: 2022ರೊಳಗೆ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗುವುದು ಎಂದು ಐಎಎಫ್ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ತಿಳಿಸಿದ್ದಾರೆ. 

2022ರೊಳಗೆ ಸೇರ್ಪಡೆಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದು ಕಾರ್ಯ ಸಂಪೂರ್ಣವಾಗಿ ಪ್ರಗತಿಯಲ್ಲಿದೆ. ಒಂದೆರೆಡು ವಿಮಾನಗಳು ಹೊರತುಪಡಿಸಿದರೆ ಸಂಪೂರ್ಣವಾಗಿ ಎಲ್ಲಾ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಲಾಗುವುದು. ಕೊರೋನಾ ಹಾಗೂ ಕೆಲ ಸಣ್ಣಪುಟ್ಟ ಸಮಸ್ಯೆಗಳು ಹೊರತುಪಡಿಸಿ ಇನ್ನೆಲ್ಲಾ ಅಂದುಕೊಂಡಂತೆ ನಡೆಯುತ್ತಿದೆ ಎಂದರು. 

59,000 ಕೋಟಿ ರೂ.ಗಳ ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತವು 2016ರಲ್ಲಿ ಫ್ರಾನ್ಸ್‌ನೊಂದಿಗೆ ಸರ್ಕಾರಗಳ ಅಧಿನದಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ 2022ರ ಫೆಬ್ರವರಿ ಅಥವಾ ಏಪ್ರಿಲ್ ವೇಳೆಗೆ ದೇಶವು ಯುದ್ಧ ವಿಮಾನಗಳ ಸಂಪೂರ್ಣ ವಾಯುಪಡೆ ಹೊಂದಲಿದೆ ಎಂದು ಹೇಳಿದ್ದರು.

ನೆರೆ ಹೊರೆ ದೇಶಗಳ ಭೌಗೋಳಿಕ ರಾಜಕೀಯ ಅನಿಶ್ಚಿತತೆ ಹಾಗೂ ಉದ್ಬವಿಸುತ್ತಿರುವ ಭದ್ರತಾ ಸವಾಲುಗಳಿಂದಾಗಿ, ಭಾರತೀಯ ವಾಯುಪಡೆ ತ್ವರಿಗತಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಮಹತ್ವದ ಪರಿವರ್ತನೆಯಲ್ಲಿದೆ ಎಂದು ವಾಯುಪಡೆಯ ಮುಖ್ಯಸ್ಥ ಏರ್‌ಚೀಫ್‌ ಮಾರ್ಷಲ್‌ ಆರ್‌ಕೆ ಎಸ್‌ ಭದೂರಿಯಾ ಹೇಳಿದ್ದಾರೆ.

ಹೈದರಾಬಾದ್‌ ಸಮೀಪದ ದುಂಡಿಗಲ್‌ನಲ್ಲಿ ವಾಯುಪಡೆ ಅಕಾಡೆಮಿಯಲ್ಲಿ ನಿರ್ಗಮನ ಪಥ ಸಂಚಲನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಿಗಧಿತ ಸಮಯದಂತೆ ವಾಯುಪಡೆಗೆ ರಫೇಲ್‌ ಯುದ್ದ ವಿಮಾನಗಳ ಸೇರ್ಪಡೆ ಯೋಜನೆ ಪ್ರಗತಿಯಲ್ಲಿದೆ. ಕೋವಿಡ್‌ ಸಾಂಕ್ರಾಮಿಕದಿಂದ ಸಣ್ಣಪುಟ್ಟ ಬದಲಾವಣೆಗಳಾಗಿರಬಹುದು, ಆದರೆ ಯೋಜಿಸಿದಂತೆ ಯುದ್ದವಿಮಾನಗಳ ಸೇರ್ಪಡೆ ಪ್ರಕ್ರಿಯೆ ಮುಂದುವರಿದಿದೆ ಎಂದು ಹೇಳಿದರು.

ಗಡಿ ವಾಸ್ತವ ರೇಖೆ ಬಳಿ ಭಾರತೀಯ ವಾಯು ಪಡೆ ಹೊಂದಿರುವ ಅನುಕೂಲಕರ ಕಾರ್ಯತಂತ್ರ ಮುಂದುವರಿದಿದ್ದು, ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇಶದ ಗಡಿಗಳಲ್ಲಿ ವಾಯಪೆಡೆಗಳ ನಿಯೋಜನೆಯನ್ನು ಅಗತ್ಯಗಳಿಗೆ ಅನುಗುಣವಾಗಿ ಬದಲಾಯಿಸಲಾಗುವುದು. ಎಸ್ -400 ಗಳಲ್ಲಿನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಳವಳವನ್ನು ಪ್ರಸ್ತಾಪಿಸಿದ ಅವರು, ಈ ಬಗ್ಗೆ ಯಾವುದೇ ಆತಂಕಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಭಾರತೀಯ ವಾಯುಪಡೆಯ ಡಿಜಿಟಲೀಕರಣ, ನೆಟ್‌ವರ್ಕಿಂಗ್ ಹಾಗೂ ಸುಧಾರಿತ ತಂತ್ರಜ್ಞಾನಗಳತ್ತ ಗಮನ ಹರಿಸಲಿದೆ ಎಂದು ಹೇಳಿದರು. ಕಳೆದ ಕೆಲವು ದಶಕಗಳಲ್ಲಿ ನಡೆದ ಯಾವುದೇ ಸಂಘರ್ಷದಲ್ಲಿ ವಿಜಯ ಸಾಧಿಸುವಲ್ಲಿ ವಾಯುಪಡೆಯ ನಿರ್ಣಾಯಕ ಪಾತ್ರ ವಹಿಸಿದೆ ಎಂದರು.

ಇದಕ್ಕೂ ಮುನ್ನ ನಡೆದ ಆಕರ್ಷಕ ಪರೇಡ್‍ ನಲ್ಲಿ 161 ಫ್ಲೈಟ್ ಕೆಡೆಟ್ ಗಳು ಅಧಿಕಾರಿಗಳಾಗಿ ಸೇರ್ಪಡೆಗೊಂಡರು. ಏರ್ ಚೀಫ್ ಮಾರ್ಷಲ್‍ ಆರ್ ಕೆ ಎಸ್ ಭದೌರಿಯಾ ಅವರು ಪರೇಡ್‍ ನಲ್ಲಿ ಗೌರವ ವಂದನೆ ಸ್ವೀಕರಿಸಿದರು. ವಿಮಾನ ಹಾರಾಟ ತರಬೇತಿ ಯಶಸ್ವಿಯಾಗಿ ಪೂರೈಸಿದ ಕೆಡೆಟ್‍ಗಳಿಗೆ ವಾಯುಪಡೆ ಮುಖ್ಯಸ್ಥರು ವಿಂಗ್ಸ್ ಮತ್ತು ಬ್ರೆವೆಟ್ಸ್ ಗಳನ್ನು ಪ್ರದಾನ ಮಾಡಿದರು. ಭಾರತೀಯ ನೌಕಾಪಡೆ ಮತ್ತು ಭಾರತೀಯ ಕರಾವಳಿ ರಕ್ಷಣಾ ಪಡೆ ಅಧಿಕಾರಿಗಳಿಗೂ ಈ ಸಂದರ್ಭದಲ್ಲಿ ವಿಂಗ್ಸ್‍ ಅನ್ನು ಪ್ರದಾನ ಮಾಡಲಾಯಿತು.

ಹಾಕ್‍, ಕಿರಣ್‍, ಪಿಲಾಟಸ್ ವಿಮಾನಗಳು ಮತ್ತು ಚೇತಕ್ ಹೆಲಿಕಾಪ್ಟರ್ ಗಳ ರೋಮಾಂಚನ ಹಾರಾಟ ಪರೇಡ್‍ ನ ಪ್ರಮುಖ ಆಕರ್ಷಣೆಯಾಗಿತ್ತು. ಪದವಿ ಪಡೆದ ಕೆಡೆಟ್‍ ಗಳ ಪೋಷಕರು ಮತ್ತು ಸಂಬಂಧಿಕರು ಸೇರಿದಂತೆ ಅಪಾರ ಸಂಖ್ಯೆಯ ಆಮಂತ್ರಿತರು ಈ ಪ್ರದರ್ಶನವನ್ನು ಕಣ್ತುಂಬಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಬುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT