ದೇಶ

ಚೀನಾದೊಂದಿಗೆ ಮುಂದಿನ ಕಮಾಂಡರ್ ಮಟ್ಟದ ಮಾತುಕತೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ: ವಾಯುಪಡೆ ಮುಖ್ಯಸ್ಥ 

Sumana Upadhyaya

ನವದೆಹಲಿ: ಪೂರ್ವ ಲಡಾಕ್ ನ ಸ್ಥಿತಿಗತಿಗೆ ಸಂಬಂಧಿಸಿದಂತೆ ಚೀನಾ ಜೊತೆ ಮತ್ತೊಂದು ಸುತ್ತಿನ ಮಾತುಕತೆ ಏರ್ಪಡುವ ಸಾಧ್ಯತೆಯಿದೆ ಎಂದು ಹೇಳಿರುವ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ಆರ್ ಕೆಎಸ್ ಬದೌರಿಯಾ, ಮುಂದಿನ ಸುತ್ತಿನ ಮಾತುಕತೆ ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಮುಂದಿನ ಕಮಾಂಡರ್ ಸುತ್ತಿನ ಮಾತುಕತೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸೇನೆ ನಿಯೋಜನೆ ಅಥವಾ ಭಾರತ ಮತ್ತು ಚೀನಾ ಕಡೆಯಿಂದ ಯಾವುದೇ ರೀತಿಯ ಬದಲಾವಣೆಗೆ ಸಂಬಂಧಪಟ್ಟಂತೆ ವಾಸ್ತವ ಪರಿಸ್ಥಿತಿಗಳನ್ನು ನಿಗಾವಹಿಸಲು ಭಾರತೀಯ ಪಡೆ ನಿಯಮಿತವಾಗಿ ಪರಿಸ್ಥಿತಿಗಳ ನಿಗಾವಹಿಸುತ್ತಿದೆ ಎಂದು ಕೂಡ ಹೇಳಿದ್ದಾರೆ.

ಪೂರ್ವ ಲಡಾಕ್ ನ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ಮುಂದಿನ ಸುತ್ತಿನ ಮಾತುಕತೆಗೆ ಸಿದ್ಧತೆ ನಡೆಯುತ್ತಿದೆ. ಕಮಾಂಡರ್ ಮಟ್ಟದ ಮಾತುಕತೆಗೆ ಪ್ರಸ್ತಾವನೆಯಿದ್ದು ಸದ್ಯದಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಮೊದಲ ಪ್ರಯತ್ನವೆಂದರೆ ಮಾತುಕತೆಗಳನ್ನು ಮುಂದುವರಿಸುವುದು ಮತ್ತು ಪೂರ್ವ ಲಡಾಕ್ ನಲ್ಲಿ ಸೇನೆ ಹಿಂಪಡೆಯುವ ಪ್ರಯತ್ನ ಮಾಡಿ ಸಮಸ್ಯೆ ಬಗೆಹರಿಸಲು ನೋಡುವುದು ಭಾರತದ ಉದ್ದೇಶವಾಗಿದೆ. ಅದಕ್ಕೆ ಸಮಾನಾಂತರವಾಗಿ, ಪ್ರಸ್ತುತ ಉಳಿದಿರುವ ಸ್ಥಳಗಳು, ನಿಯೋಜನೆಗಳು ಅಥವಾ ಯಾವುದೇ ಬದಲಾವಣೆಗಳ ವಿಷಯದಲ್ಲಿ ನೆಲದ ವಾಸ್ತವತೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನಮ್ಮ ಭಾಗಗಳಲ್ಲಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ ಎಂದರು.

SCROLL FOR NEXT