ಸಾಂದರ್ಭಿಕ ಚಿತ್ರ 
ದೇಶ

ಸೆಪ್ಟೆಂಬರ್- ಅಕ್ಟೋಬರ್ ನಲ್ಲಿ ಕೋವಿಡ್-19 ಮೂರನೇ ಅಲೆ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ: ಐಐಟಿ ಕಾನ್ಪುರ ಅಧ್ಯಯನ

ಈ ವರ್ಷದ ಸೆಪ್ಟೆಂಬರ್- ಅಕ್ಟೋಬರ್ ಅವಧಿಯಲ್ಲಿ ಕೋವಿಡ್-ಮೂರನೇ ಅಲೆ ಉತ್ತುಂಗಕ್ಕೇರುವ ಸಾಧ್ಯತೆಯಿದೆ ಎಂದು ಕಾನ್ಪುರ ಐಐಟಿಯ ಪ್ರೊಫೆಸರ್ ರಾಜೇಶ್ ರಂಜನ್, ಮಹೇಂದ್ರ ವರ್ಮಾ ಮತ್ತಿತರನ್ನೊಳಗೊಂಡ ತಂಡ ನಡೆಸಿರುವ ಅಧ್ಯಯನದಲ್ಲಿ ತಿಳಿದುಬಂದಿದೆ.

ನವದೆಹಲಿ: ಈ ವರ್ಷದ ಸೆಪ್ಟೆಂಬರ್- ಅಕ್ಟೋಬರ್ ಅವಧಿಯಲ್ಲಿ ಕೋವಿಡ್-ಮೂರನೇ ಅಲೆ ಉತ್ತುಂಗಕ್ಕೇರುವ ಸಾಧ್ಯತೆಯಿದೆ ಎಂದು ಕಾನ್ಪುರ ಐಐಟಿಯ ಪ್ರೊಫೆಸರ್ ರಾಜೇಶ್ ರಂಜನ್, ಮಹೇಂದ್ರ ವರ್ಮಾ ಮತ್ತಿತರನ್ನೊಳಗೊಂಡ ತಂಡ ನಡೆಸಿರುವ ಅಧ್ಯಯನದಲ್ಲಿ ತಿಳಿದುಬಂದಿದೆ.

ಮೂರನೇ ಅಲೆ ಬಗ್ಗೆ ಆಡಳಿತಗಾರರು ಹಾಗೂ ಸಾರ್ವಜನಿಕರಲ್ಲಿ ಗಮನಾರ್ಹ ರೀತಿಯ ಆತಂಕವಿದೆ. ಇದಕ್ಕಾಗಿ, ಎಸ್‌ಐಆರ್ ಮಾದರಿ ಬಳಸಿಕೊಂಡು, ಎರಡನೇ ತರಂಗದ ಸಾಂಕ್ರಾಮಿಕ ನಿಯತಾಂಕಗಳನ್ನು ಬಳಸಿಕೊಂಡು ಸಂಭವನೀಯ ಮೂರನೇ ತರಂಗದ ಕೆಳಗಿನ ಮೂರು ಸನ್ನಿವೇಶಗಳನ್ನು ನಿರ್ಮಿಸಿದ್ದಾರೆ.

ಜುಲೈ 15 ರ ಹೊತ್ತಿಗೆ ದೇಶದಲ್ಲಿ ಸಂಪೂರ್ಣ ಅನ್ ಲಾಕ್ ಅಂತಾ ಭಾವಿಸಿದರೆ ಸನ್ನಿವೇಶ 1 ( ಸಂಪೂರ್ಣ ಸಹಜ ಪರಿಸ್ಥಿತಿ) ಮೂರನೇ ಅಲೆ ಅಕ್ಟೋಬರ್ ನಲ್ಲಿ ಗರಿಷ್ಠ ಹಂತ ತಲುಪಲಿದೆ. ಆದರೆ, ಎರಡನೇ ಅಲೆಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತದೆ.

ಸನ್ನಿವೇಶ 2 ( ವೈರಸ್ ರೂಪಾಂತರಗಳೊಂದಿಗೆ ಸಾಮಾನ್ಯ ಪರಿಸ್ಥಿತಿ) ಎರಡನೆಯದಕ್ಕಿಂತ ಹೆಚ್ಚಿರಬಹುದು ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಕಾಣಿಸಿಕೊಳ್ಳಬಹುದು.

 ಸನ್ನಿವೇಶ 3( ಕಠಿಣ ಮಧ್ಯಸ್ಥಿಕೆಗಳು)  ಕಠಿಣ ಸಾಮಾಜಿಕ ಅಂತರ ಪಾಲನೆಯೊಂದಿಗೆ ಅಕ್ಟೋಬರ್ ಅಂತ್ಯದವರೆಗೂ ಮೂರನೇ ಅಲೆ ಉತ್ತುಂಗ ವಿಳಂಬವಾಗುವ ಸಾಧ್ಯತೆಯಿದೆ. ಮೂರನೇ ಅಲೆ ಉತ್ತುಂಗತ್ತೆ ಎರಡನೇ ಅಲೆಗಿಂತ ಕಡಿಮೆಯಾಗಿರುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಲಾಗಿದೆ.

ಪ್ರೊ. ರಾಜೇಶ್ ರಂಜನ್ ಮತ್ತು ಮಹೇಂದ್ರ ವರ್ಮಾ, ಐಐಟಿ ಕಾನ್ಪುರದ ತಮ್ಮ ತಂಡದೊಂದಿಗೆ, ದೇಶದಲ್ಲಿನ ದೈನಂದಿನ ಕೋವಿಡ್-19 ಮುನ್ಸೂಚನೆಗಳನ್ನು covid19-forecast.org ನಲ್ಲಿ ಒದಗಿಸುತ್ತಾರೆ. ಐಐಟಿ ಕಾನ್ಪುರ್ ತಂಡದ ಪ್ರಕಾರ, ಕೆಲವು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದಂತೆ  ಎರಡನೇ ಅಲೆಯೂ ಪ್ರತಿಯೊಂದು ರಾಜ್ಯದಲ್ಲೂ ಗಮನಾರ್ಹವಾಗಿ ಕ್ಷೀಣಿಸಿದೆ.

ದೇಶದಲ್ಲಿ ಸರಾಸರಿ ದೈನಂದಿನ ಪ್ರಕರಣಗಳಲ್ಲಿ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿದೆ. ಬಹುತೇಕ ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 5ಕ್ಕಿಂತ ಕಡಿಮೆಯಿದೆ. ಆದರೆ, ಕೇರಳ, ಗೋವಾ, ಸಿಕ್ಕಿಂ ಮತ್ತು ಮೇಘಾಲಯದಲ್ಲಿ ಪಾಸಿಟಿವಿಟಿ ದರ ಶೇ. 10 ರಷ್ಟಿದೆ.ಈ ವಾರದ ಅಂತ್ಯದ ವೇಳೆಗೆ, ಐಐಟಿ ಕಾನ್ಪುರದ ಮೂರನೇ ತರಂಗದ ಕುರಿತು ಮತ್ತೊಂದು ಅಧ್ಯಯನ ಹೊರಬರುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!